ರಾಮನಗರ, ನ 24(Daijiworld News/MB) : ಹೊಟ್ಟೆಯೊಳಗೆ ಪಿನ್, ಮುಳ್ಳು ಮುಂತಾದವುಗಳು ಹೋಗಿರುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲಿನ ವ್ಯಕ್ತಿಯೊಬ್ಬರ ಗುದದ್ವಾರದ ಮೂಲಕ ಪೊರಕೆಯ ಹಿಡಿ ಒಳಗಡೆ ಹೊಕ್ಕಿದ್ದು ಅದನ್ನು ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ದಿನಗಳ ಹಿಂದೆ ಇಲ್ಲಿನ ಮೆಹಬೂಬ್ ನಗರದ ನಿವಾಸಿ ಇರ್ಫಾನ್ ಷರೀಫ್ ಅವರ ಗುದದ್ವಾರದ ಮೂಲಕ ಪೊರಕೆಯ ಹಿಡಿ ಹೊಕ್ಕಿದ್ದು ಅವರು ನಗರದ ನಾರಾಯಣ ಆಸ್ಪತ್ರೆಯಲ್ಲಿ ದಾಖಾಲಾಗಿದ್ದರು.
ಪೊರಕೆಯ ಹಿಡಿ 21 ಸೆಂಟಿ ಮೀಟರ್ ಇದ್ದು ಕರುಳಿನ ಭಾಗದವರೆಗೂ ಹೊಕ್ಕಿ ತೀವ್ರ ಸಂಕಟ ನೀಡುತ್ತಿತ್ತು.
ನವೆಂಬರ್ 24 ರ ಭಾನುವಾರ ಶಸ್ತ್ರಚಿಕಿತ್ಸೆ ಮಾಡಿದ ಡಾ.ಎಸ್.ವಿ. ನಾರಾಯಣಸ್ವಾಮಿ ಪೊರಕೆಯ ಹಿಡಿಯನ್ನು ಹೊರತೆಗೆದಿದ್ದು ಅಷ್ಟು ಉದ್ದನೆಯ ಪೊರಕೆಯ ಹಿಡಿ ಗುದದ್ವಾರಕ್ಕೆ ಹೊಕ್ಕದಾದರು ಹೇಗೆ? ಎಂಬ ಪ್ರಶ್ನೆ ಮೂಡಿದೆ.