ಮುಂಬೈ, ನ 24(Daijiworld News/MB) : ನಾಪತ್ತೆಯಾಗಿದ್ದ ಶಹಪುರ ಎನ್ ಸಿಪಿ ಶಾಸಕ ದೌಲತ್ ದರೊಡ ಈಗ ಪ್ರತ್ಯಕ್ಷವಾಗಿ "ನಾನು ಶರದ್ ಪವಾರ್ ಅವರಿಗೆ ಬೆಂಬಲು ಸೂಚಿಸುತ್ತೇನೆ "ಹೇಳಿಕೆ ನೀಡಿದ್ದು ವಿಡೀಯೋ ಅವರ ಫೇಸ್ ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
"ನನಗೆ ಯಾವ ತೊಂದರೆಯೂ ಆಗಿಲ್ಲ. ನಾನು ಸುರಕ್ಷತವಾಗಿದ್ದೇನೆ. ನಾನು ಈಗಾಗಲೇ ಚುನಾವಣೆಯಲ್ಲಿ ಎನ್ಸಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಕಂಡಿದ್ದೇನೆ. ಹಾಗಿರುವಾಗ ಪಕ್ಷವನ್ನು ಬದಲಾವಣೆ ಮಾಡಲು ಸಾಧ್ಯವೇ ಇಲ್ಲ. ಶರತ್ ಪವಾರ್ ಹಾಗೂ ಅಜಿತ್ ಪವಾರ್ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಆ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದು ತಾನು ಅಜಿತ್ ಪವಾರ್ ಪರವೂ ಇದ್ದೇನೆ ಎಂಬ ಅವರ ಹೇಳಿಕೆ ಗೊಂದಲಕ್ಕೆ ಎಡೆಮಾಡಿದೆ.
ನವೆಂಬರ್ 23 ರಂದು ಬೆಳಿಗ್ಗೆ ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಅಲ್ಲಿ ಇದ್ದ ಶಹಪುರ ಎನ್ ಸಿಪಿ ಶಾಸಕ ದೌಲತ್ ದರೊಡ ನಂತರ ಕಾಣೆಯಾಗಿದ್ದಾರೆ ಎಂದು ಮಾಜಿ ಶಾಸಕ ಪಾಂಡುರಂಗ ಬರೊರ ಶಹಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.
ನವೆಂಬರ್ 23 ರಂದು ಮಾಧ್ಯಮದವರಲ್ಲಿ ಮಾತಾನಾಡಿದ ದೌಲತ್ ದರೊಡ ಅವರ ಪುತ್ರ ಕರಣ್ " ನಮ್ಮ ತಂದೆ ಎಲ್ಲಿ ಹೋಗಿದ್ದಾರೆ ಎಂದು ನಮಗೆ ತಿಳಿದಿಲ್ಲ. ನಿನ್ನೆ ಬೆಳಿಗ್ಗೆಯಿಂದ ನಮ್ಮ ಸಂಪರ್ಕಕ್ಕೂ ಸಿಗುತಿಲ್ಲ. ಅವರು ಶರತ್ ಪವಾರ್ ಜೊತೆ ಇರಬೇಕು ಎಂಬುದು ನಮ್ಮ ಆಸೆ" ಎಂದು ಹೇಳಿದ್ದರು.