ನವದೆಹಲಿ, ನ 25 (Daijiworld News/MB) : ಮಹಾರಾಷ್ಟ್ರದಲ್ಲಿ ದಿನಬೆಳಗಾಗುವುದರಲ್ಲಿ ಬಿಜೆಪಿ ಮತ್ತು ಎನ್ ಸಿಪಿಯ ಕೆಲವು ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅನುವು ಮಾಡಿ ಕೊಟ್ಟದನ್ನು ವಿರೋಧಿಸಿ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನಾ ಸಲ್ಲಿಸಿದ್ದ ರಿಟ್ ಅರ್ಜಿಯ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಮಂಗಳವಾರಕ್ಕೆ ಕಾಯ್ದಿರಿಸಿದೆ.
ಈ ಅರ್ಜಿಯ ವಿಚಾರಣೆಯನ್ನು ಎನ್ ವಿ ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ತ್ರಿಸದಸ್ಯ ಪೀಠ ಕೈಗಿತ್ತಿಕೊಂಡಿದ್ದು, ಕೇಂದ್ರ ಸರ್ಕಾರ ಪರ ವಕೀಲರು "ಬಿಜೆಪಿ ನೇತೃತ್ವದ ಸರ್ಕಾರಕ್ಕೆ 170 ಶಾಸಕರ ಬೆಂಬಲ ಇರುವುದರಿಂದ ರಾಜ್ಯಪಾಲರು ದೇವೇಂದ್ರ ಫಡ್ನವೀಸ್ ಗೆ ಸರಕಾರ ರಚನೆ ಮಾಡಲು ಆಹ್ವಾನ ನೀಡಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಫಡ್ನವೀಸ್ ಗೆ 170 ಶಾಸಕರ ಬೆಂಬಲವಿದ್ದು ಬಹುಮತ ಇದೆ. ಹೀಗಾಗಿ ಸರ್ಕಾರ ರಚನೆ ಮಾಡಿದ್ದಾರೆ. ಯಾವುದೇ ಶಾಸಕರ ಸಹಿ ಪೋರ್ಜರಿ ಮಾಡಿಲ್ಲ. ಪವಾರ್ ಕುಟುಂಬದಲ್ಲಿ ಆಗಿರುವುದಕ್ಕೂ, ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಫಡ್ನವೀಸ್ ಪರ ಹಿರಿಯ ವಕೀಲ ರೋಹ್ಟಗಿ ವಾದ ಮಂಡಿಸಿದ್ದಾರೆ.
ನ್ಯಾ.ಖನ್ನಾ "ಎನ್ ಸಿಪಿ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಬೆಂಬಲ ಇಲ್ಲ ಎಂದು ಹೇಳಿಕೆ ನೀಡಿದೆ. ಕೌಟುಂಬಿಕ ಜಗಳದಿಂದ ನಮಗೆ ಆಗುವುದೇನಿದೆ? ಸಿಎಂ ಫಡ್ನವೀಸ್ ಸರ್ಕಾರಕ್ಕೆ ಬಹುಮತ ಇದೆಯೇ ಎಂದು ಪ್ರಶ್ನಿಸಿದ್ದು ಅದಕ್ಕೆ ಪ್ರತಿಕ್ರಿಯೆ ನೀಡಿದ ಫಡ್ನವೀಸ್ ಪರ ಹಿರಿಯ ವಕೀಲ ರೋಹ್ಟಗಿ ಬಹುಮತ ಸಾಬೀತು ಮಾಡಲು ಸಮಯ ನಿಗದಿ ಮಾಡಬಾರದು. ಬಹುಮತ ಸಾಬೀತು ಮಾಡಲು ಫಡ್ನವೀಸ್ ಸರ್ಕಾರ ಸಿದ್ದವಿದೆ
ಈಗಾಗಲೇ ಬಹುಮತ ಸಾಬೀತುಪಡಿಸಲು ನಿಯಮ ರೂಪಿಸಲಾಗಿದೆ. ಆದರೆ ಕೋರ್ಟ್ ಸದನದ ನಿಯಮವಳಿ ನಿಯಂತ್ರಿಸುವ ಆದೇಶ ನೀಡಬಾರದು. ಹಂಗಾಮಿ ಸ್ಪೀಕರ್ ಆಯ್ಕೆಯಾದ ಬಳಿಕ ಶಾಸಕರ ಪ್ರಮಾನವಚನ ಸ್ವೀಕಾರ ನಡೆಯಬೇಕು. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ನಡೆಯಲಿ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.