ಬೆಂಗಳೂರು, ನ.25(Daijiworld News/SS): ದೇಶದ ಹೆಚ್ಚಿನ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ರಾಜೀನಾಮೆ ನೀಡಿದ ಶಾಸಕರಿಗೆ ಅನರ್ಹರು ಎಂದು ಕರೆಯಲಾಯಿತು. ಅವರು ಜನರಿಂದ ಆಯ್ಕೆಯಾದವರು, ಇಂದು ಮತ್ತೊಮ್ಮೆ ಜನರ ಮುಂದೆ ಬಂದಿದ್ದಾರೆ. ಜನರ ಆಶೀರ್ವಾದದಿಂದ ಜಯಶೀಲರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಪೂರ್ವ ಮೈತ್ರಿಗೆ ಬೆಲೆ ಇಲ್ಲದ್ದಂತಾಗಿದೆ. ಬಿಜೆಪಿ ಹಳೆ ಗೆಳೆತನಕ್ಕೆ ಬೆಲೆ ನೀಡಿದ್ದೇ ತಪ್ಪಾಗಿದೆ. ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಸರಳ ಬಹುಮತವಂತೂ ಬಂದೇ ಬರುತ್ತಿತ್ತು. ಇನ್ನಾರು ತಿಂಗಳಲ್ಲಿ ಶಿವಸೇನಾ ಎಂಬ ಪಕ್ಷ ಇತ್ತು ಎಂಬುದನ್ನು ಜನರು ಮರೆಯುತ್ತಾರೆ. ಸಂಪೂರ್ಣವಾಗಿ ನಿರ್ಮಾಣವಾಗಲಿದೆ ಎಂದು ಸದಾನಂದ ಗೌಡ ಹೇಳಿದರು.