ಮುಂಬೈ, ನ 25 (Daijiworld News/MB) : ಮಹಾರಾಷ್ಟ್ರದಲ್ಲಿ ದಿನಬೆಳಗಾಗುವುದರಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು, ಸರಕಾರ ರಚನೆ ಮಾಡಲು ಅವಕಾಶ ಕೊಟ್ಟ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ರಿಟ್ ಅರ್ಜಿ ಸಲ್ಲಿಸಿದ್ದು ತನಿಖೆ ನಡೆಯುತ್ತಿರುವಾಗಲೇ ಇಂದು ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ರಚಿಸುವ ಕುರಿತು 162 ಶಾಸಕರ ಸಹಿಯುಳ್ಳ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದೆ ಎಂದು ವರದಿ ತಿಳಿಸಿದೆ.
ಸರಕಾರ ರಚನೆಗೆ ಬೇಕಾದ ಸದಸ್ಯ ಬಲ ನಮ್ಮ ಮೂರು ಪಕ್ಷಗಳಿಗೂ ಇದೆ ಎಂದು ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಈ ಮೂರು ಪಕ್ಷಗಳು ನೀಡಿದ ಪತ್ರದಲ್ಲಿ ಪಕ್ಷೇತರರು ಸೇರಿ ಶಿವಸೇನೆಯ 63 ಶಾಸಕರ ಸಹಿ, ಕಾಂಗ್ರೆಸ್ ಪಕ್ಷದ 44 ಹಾಗೂ ಎನ್ ಸಿಪಿಯ 51 ಶಾಸಕರ ಸಹಿ, ಸಮಾಜವಾದಿ ಪಕ್ಷ ಕೂಡಾ ಈ ಮೂರು ಪಕ್ಷಗಳ ಜತೆ ಕೈಜೋಡಿಸಿದ್ದು, ಇಬ್ಬರು ಶಾಸಕರು ಸಹಿ ಹಾಕಿರುವ ಪತ್ರವನ್ನು ರಾಜ್ಯಪಾಲರಿಗೆ ನೀಡಲಾಗಿದೆ.
ಈ ಮೊದಲು ತಮ್ಮ ಎನ್.ಸಿ.ಪಿ.ಪಕ್ಷ ಬಿಜೆಪಿ ಜೊತೆಗಿದೆ ಎಂದು ಹೇಳಿದ ಎನ್ ಸಿಪಿಯ ಅಜಿತ್ ಪವಾರ್, ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ಎನ್ ಸಿಪಿಯ 54 ಶಾಸಕರಲ್ಲಿ 51 ಶಾಸಕರ ಸಹಿ ಇದೆ.