ನವದೆಹಲಿ, ನ.25(Daijiworld News/SS): ಪೆಟ್ರೋಲ್ ಬೆಲೆಯಲ್ಲಿ ಅಲ್ಪಮಟ್ಟಿನ ಏರಿಳಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 76.29 ರೂಪಾಯಿ ಇದೆ. ಕಳೆದೆರಡು ದಿನಗಳಿಗೆ ಹೋಲಿಸಿದರೆ, ಪೆಟ್ರೋಲ್ ಬೆಲೆಯಲ್ಲಿ 10 ಪೈಸೆ ಏರಿಕೆಯಾಗಿದೆ.
ತೈಲ ಕಂಪನಿಗಳ ಕಳೆದ ದಿನದ ಸರಾಸರಿ ಬೆಲೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಆಧರಿಸಿ ಪೆಟ್ರೋಲ್, ಡೀಸೆಲ್ ದರ ನಿರ್ಣಯವಾಗುತ್ತದೆ.
ಮಹಾರಾಷ್ಟ್ರದ ಮುಂಬಯಿನಲ್ಲಿ ಪೆಟ್ರೋಲ್ 80.10 ರೂಪಾಯಿ ಮತ್ತು ಡೀಸೆಲ್ 69.01 ರೂಪಾಯಿ ಇದೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.69 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ಬೆಲೆ 72.03 ರೂಪಾಯಿ ಇದೆ. ಔರಂಗಾಬಾದ್ನಲ್ಲಿ ಪೆಟ್ರೋಲ್ 81.04 ರೂಪಾಯಿ ನಿಗದಿಯಾಗಿದ್ದು, ಹಿಂದಿನ ಬೆಲೆಗೆ ಹೋಲಿಸಿದರೆ 15 ಪೈಸೆ ಏರಿಕೆಯಾಗಿದೆ. ಡೀಸೆಲ್ ಬೆಲೆ 70.10 ರೂಪಾಯಿ ಇದೆ.