ಸತಾರಾ, ನ 25 (DaijiworldNews/SM): ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸರಕಾರ ರಚನೆ ಇನ್ನೂ ಸಾಧ್ಯವಾಗಿಲ್ಲ. ಇದೀಗ ಈ ವಿಚಾರ ಸುಪ್ರೀಂ ಅಂಗಳದಲ್ಲಿದೆ. ಈ ನಡುವೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶರದ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ಬಿಜೆಪಿ ಪಕ್ಷಕ್ಕೆ ಬಹುಮತವಿಲ್ಲ. ಹೀಗಾಗಿಯೇ ಅವರು ಸರ್ಕಾರ ರಚಿಸಿರಲಿಲ್ಲ ಎಂದು ಪವಾರ್ ಹೇಳಿದ್ದಾರೆ.
ಬಿಜೆಪಿಗೆ ಬಹುಮತವಿಲ್ಲ. ಹೀಗಾಗಿಯೇ ಅವರು ಸರ್ಕಾರ ರಚಿಸಿರಲಿಲ್ಲ. ಮಾತ್ರವಲ್ಲದೆ ತಮಗೆ ಬಹುಮತವಿಲ್ಲ ಹಾಗೂ ನಾವು ಶಿವಸೇನೆಯನ್ನು ದೂರವಿಟ್ಟು ಸರಕಾರ ರಚಿಸುವುದಿಲ್ಲ ಎಂದು ಈ ಹಿಂದೆಯೇ ರಾಜ್ಯಪಾಲರಿಗೂ ಬಿಜೆಪಿ ಪತ್ರ ಬರೆದಿತ್ತು ಎಂದು ಹೇಳಿದ್ದಾರೆ.
ಇನ್ನು ನಮ್ಮ ಶಾಸಕರೊಂದಿಗೆ ನಾವು ಸಭೆ ನಡೆಸಿ ಚರ್ಚಿಸಿದ್ದೇವೆ. ಸರ್ಕಾರ ರಚಿಸುವಲ್ಲಿ ನಮ್ಮ ಎನ್'ಸಿಪಿ ಪಕ್ಷ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.