ನವದೆಹಲಿ, ನ 26 (Daijiworld News/MB) : ಅಯೋಧ್ಯೆ ತೀರ್ಪಿಗೆ ಸಂಬಂಧಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸದಿರಲು ಸುನ್ನಿ ವಕ್ಫ್ ಬೋರ್ಡ್ ನಿರ್ಧರಿಸಿದೆ.
ಇಂದು ವಕ್ಫ್ ಬೋರ್ಡ್ ನ 7 ದಾವೆದಾರರ ನಡೆಸಿದ್ದು ಸಭೆಯಲ್ಲಿ 6 ದಾವೆದಾರರು ಮರು ಪರಿಶೀಲನಾ ಅರ್ಜಿಸಲು ಒಪ್ಪದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ತೆಗೆದುಕೊಳ್ಳಲಾಗಿದೆ.
ಸುಪ್ರೀಂ ಕೋರ್ಟ್ ವಿವಾದಿತ ಭೂಮಿಯನ್ನು ರಾಮಲಲ್ಲಾಗೆ ನೀಡಿತ್ತು. ಇನ್ನು ಬಾಬರಿ ಮಸೀದಿ ಧ್ವಂಸ ಮಾಡಿ ಮತ್ತೊಂದು ಧರ್ಮದ ಆಚರಣೆಗೆ ಧಕ್ಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲೇ ವಕ್ಫ್ ಬೋರ್ಡ್ ಗೆ 5 ಎಕರೆ ಭೂಮಿಯನ್ನು ನೀಡಲು ಆದೇಶಿಸಿತ್ತು.
ದಿ ಎಐಎಮ್ಪಿಎಲ್ಬಿ ಐದು ಎಕರೆ ಭೂಮಿಯನ್ನು ಸ್ವೀಕರಿಸಲು ನಿರಾಕರಿಸಿ ಹಾಗೂ ಸುಪ್ರೀಂ ನೀಡಿರುವ ಅಯೋಧ್ಯೆ ತೀರ್ಪನ್ನು ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಲು ನವೆಂಬರ್ 17 ರಂದು ಸಭೆ ನಡೆಸಿ ನಿರ್ಧರಿಸಿತ್ತು. ಈ ಸಭೆಯಿಂದ ಸುನ್ನಿ ಸೆಂಟ್ರಲ್ ವಕ್ಪ್ ಬೋರ್ಡ್ ಹೊರಗುಳಿದಿತ್ತು.