ಬೆಳಗಾವಿ, ನ 26 (Daijiworld News/MB) : ಉಪಚುನಾವಣೆಯ ಹಿನ್ನಲೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಇರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ " ಉಪಚುನಾವಣೆಯ ನಂತರ ಸಿದ್ಧರಾಮಯ್ಯನವರು ವಿಪಕ್ಷ ನಾಯಕನ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಆ ಬಳಿಕ ಕಾಂಗ್ರೆಸ್ನಿಂದಲ್ಲೇ ಹೊರಗೆ ಉಳಿಯುತ್ತಾರೆ" ಎಂದು ಹೇಳಿದ್ದಾರೆ.
"ಸಿದ್ಧರಾಮಯ್ಯರವರು ತನ್ನ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ ಹೇಳಿದ್ದು ನಂತರ ಈಗ ವಿರೋಧ ಪಕ್ಷದ ಸ್ಥಾನಕ್ಕೂ ನಾಲಾಯಕ್ಕಾಗಿದ್ದಾರೆ. ಅವರು ಎದೆ ತಟ್ಟಿಕೊಂಡು ಲೋಕಸಭೆ ಚುನಾವಣೆಯಲ್ಲಿ ಓಡಾಡಿದರು. ಆದರೆ ಒಂದೇ ಸ್ಥಾನದಲ್ಲಿ ಗೆದ್ದಿದ್ದಾರೆ. ಈ ಚುನಾವಣೆಯ ಬಳಿಕ ಸಿದ್ಧರಾಮಯ್ಯನವರು ವಿರೋಧ ಪಕ್ಷದ ಸ್ಥಾನವನ್ನು ಕೂಡಾ ಕಳೆದುಕೊಳ್ಳುತ್ತಾರೆ. ನಂತರ ಕಾಂಗ್ರೆಸ್ನಿಂದಲ್ಲೇ ಹೊರಗೆ ಉಳಿಯುತ್ತಾರೆ" ಎಂದು ನಳೀನ್ ತಿಳಿಸಿದ್ದಾರೆ.
"ಬಿಜೆಪಿ ಯಾವ ಭ್ರಮೆಯಲ್ಲೂ ಇಲ್ಲ. ಸಿದ್ಧರಾಮಯ್ಯ ಮಾತ್ರ ಭ್ರಮೆಯಲ್ಲಿದ್ದಾರೆ. ಅವರು ಕಂಡಿದ್ದ ಮೂರು ಭ್ರಮೆಗಳು ಇಂದು ಸುಳ್ಳಾಗಿದೆ. ಚುನಾವಣೆಯಲ್ಲಿ ಇವರು ನೇತೃತ್ವ ಹೊತ್ತಲ್ಲಿ ಸೋತಿದ್ದಾರೆ. ಅವರನ್ನು ಅವರ ಕ್ಷೇತ್ರದ ಜನರೇ ಅನರ್ಹರೆಂದು ಹೇಳಿದ್ದು ಆ ಹಿನ್ನಲೆಯಲ್ಲಿ ಅವರು ತನ್ನ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದರು" ಎಂದು ನಳೀನ್ ಸಿದ್ಧರಾಮಯ್ಯ ಅವರನ್ನು ವ್ಯಂಗ್ಯ ಮಾಡಿದ್ದಾರೆ.
"ಹಾಗೆಯೇ ಸಿದ್ಧರಾಮಯ್ಯ ಅವರು ಈಗಾಗಲೇ ಬಹಳಷ್ಟು ಶಬ್ದಗಳ ಅರ್ಥ ಹುಡುಕಿದ್ದಾರೆ. ಅವರಿಗೆ ಅರ್ಥವನ್ನು ಅನರ್ಥ ಅನರ್ಥವನ್ನು ಅರ್ಥ ಮಾಡಬಲ್ಲ ತಾಕತ್ತಿದೆ. ಸಿದ್ಧರಾಮಯ್ಯ ಬುದ್ಧಿವಂತರು ಉಚುನಾವಣೆಯ ನಂತರ ಅವರೊಬ್ಬರೇ ಕಾಂಗ್ರೆಸ್ನಲ್ಲಿ ಉಳಿಯುತ್ತಾರೆ" ಎಂದಿದ್ದಾರೆ.
ಮಹಾರಾಷ್ಟ್ರ ಸರಕಾರದ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, "ಬಿಜೆಪಿ ಬುಧವಾರ ಶಕ್ತಿ ಪ್ರದರ್ಶನ ಮಾಡಲಿದೆ. ಯಾವ ರೀತಿ ಬೆಳಿಗ್ಗಾಗುವುದರಲ್ಲಿ ರಾಜಕೀಯ ತಿರುವು ಪಡೆದು ಬಿಜೆಪಿ ಸರಕಾರ ರಚನೆ ಮಾಡಿತೋ ಅದೇ ರೀತಿ ಬುಧವಾರವೂ ತಿರುವು ಪಡೆಯಲಿದೆ" ಎಂದು ಇವರು ಹೇಳಿದ್ದಾರೆ.