ತಿರುವನಂತಪುರ, ನ 26 (Daijiworld News/MSP): ಶಬರಿಮಲೆ ಪ್ರವೇಶಿಸಿಯೇ ಸಿದ್ದ ಎಂದು ಮಂಗಳವಾರ ಬೆಳಗ್ಗೆ ಕೊಚ್ಚಿಗೆ ಆಗಮಿಸಿದ್ದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸಲು ಸಜ್ಜಾಗಿ ನಿಂತಿರುವ ತೃಪ್ತಿ ದೇಸಾಯಿ ವಿರುದ್ದ ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಬರಿಮಲೆಯಲ್ಲಿ ಶಾಂತಿಯನ್ನು ಭಂಗಗೊಳಿಸಲು ತೃಪ್ತಿ ದೇಸಾಯಿ ನೇತೃತ್ವದ ಗುಂಪು ಪಿತೂರಿ ನಡೆಸುತ್ತಿದೆ ಎಂದು ನನಗೆ ಅನುಮಾನವಿದೆ. ತೃಪ್ತಿ ದೇಸಾಯಿ ಕೊಚ್ಚಿಗೆ ಆಗಮಿಸುವ ಮತ್ತು ಕಳೆದ ಬಾರಿ ದೇಗುಲ ಪ್ರವೇಶಿದ್ದ ಬಿಂದು ಅಮ್ಮಣ್ಣಿ ಮೇಲಿನ ಪೆಪ್ಪರ್ ಸ್ಪ್ರೇ ದಾಳಿ ಎಲ್ಲವೂ ಪೂರ್ವ ಯೋಜಿತ ಕಾರ್ಯಸೂಚಿಯ ಭಾಗವಾಗಿತ್ತು. ಅವರ ಪಿತೂರಿಯಂತೆ ಶಬರಿಮಲೆಯಲ್ಲಿ ಶಾಂತಿ ಭಂಗವಾಗಲು ಸರ್ಕಾರ ಬಿಡುವುದಿಲ್ಲ ಎಂದು ಹೇಳಿದರು.
ಬಿಂದು ಅಮ್ಮಣ್ಣಿ ಅವರೊಂದಿಗೆ ತೃಪ್ತಿ ದೇಸಾಯಿ ತಂಡ ದೇಗುಲ ಮಂಗಳವಾರ ದೇಗುಲ ಪ್ರವೇಶಿಸುವುದಾಗಿ ಹೇಳಿಕೆ ನೀಡಿತ್ತು. ದೇವಸ್ಥಾನಕ್ಕೆ ಭೇಟಿ ನೀಡುವುದು ನಮ್ಮ ಹಕ್ಕು. ಕೇರಳ ಸರ್ಕಾರ ಭದ್ರತೆ ನೀಡಿದರೂ, ನೀಡದಿದ್ದರೂ ದೇಗುಲ ಪ್ರವೇಶಿಸುವುದಾಗಿ ತೃಪ್ತಿ ದೇಸಾಯಿ ಹೇಳಿದ್ದರು. ಇದರ ಬೆನ್ನಲ್ಲೇ ಮಂಗಳವಾರ ಬೆಳಗ್ಗೆ ಪೊಲೀಸ್ ಕಮಿಷನರ್ ಮುಂಭಾಗ ಬಿಂದು ಅಮ್ಮಣ್ಣಿ ಅವರ ಮೇಲೆ ವ್ಯಕ್ತಿಯೋರ್ವ ಪೆಪ್ಪರ್ ಸ್ಪ್ರೇ ದಾಳಿ ನಡೆಸಿದ್ದ.