ಬೆಂಗಳೂರು, ನ 27 (Daijiworld News/MB) : ಸ್ವಯಂಘೋಷಿತ ದೇವ ಮಾನವನ ನಿತ್ಯಾನಂದನ ಮೇಲೆ ಈಗಾಗಲೇ ಅಕ್ರಮ ಬಂಧನದ ಆರೋಪವಿದ್ದು ಅದರ ಬೆನ್ನಲ್ಲೇ ಅವರ ಆಶ್ರಮದ ಹೊರಭಾಗದಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟಿರುವ ಯುವತಿಯೊಬ್ಬರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಮೃತ ಯುವತಿಯ ತಾಯಿ ಒತ್ತಾಯಿಸಿದ್ದಾರೆ.
2014ರ ಡಿಸೆಂಬರ್ 28ರಂದು ಬೆಂಗಳೂರು ಹೊರವಲಯದಲ್ಲಿರುವ ನಿತ್ಯಾನಂದನ ಆಶ್ರಮದ ಹೊರಗಡೆ ಸಂಗೀತಾ(24) ಮೃತಪಟ್ಟಿದ್ದು ನಿತ್ಯಾನಂದನ ಆಶ್ರಮದಲ್ಲಿ ತಮ್ ಪುತ್ರಿಗೆ ಹಿಂಸೆ ನೀಡಲಾಗಿದ್ದು ಆ ಕಾರಣದಿಂದ ನಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ಮೃತ ಯುವತಿಯ ತಾಯಿ ಜಾನ್ಸಿ ರಾಣಿ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿಲ್ಲ. ಆ ಕಾರಣದಿಂದ ಈ ತನಿಖೆಯನ್ನು ಸಿಬಿಐ ಗೆ ಹಸ್ತಾಂತರಿಸಬೇಕು. ಬೆಂಗಳೂರಿನ್ಲಲ್ಲಿರುವ ನಿತ್ತಯಾನಂದ ಆಶ್ರಮದಲ್ಲಿ ವಾಸಿಸುತ್ತಿದ್ದ ಹಲವು ಯುವಕ ಯುವತಿಯರು ಹಿಂಸೆ ನೀಡಲಾಗುತ್ತಿದ್ದು ಹಲವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಹೀಗಿರುವಾಗ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಜಾನ್ಸಿ ರಾಣಿ ಆಗ್ರಹಿಸಿದ್ದಾರೆ.
ತಮಿಳುನಾಡು ಮೂಲದ ಸಂಗೀತಾ 2010ರಲ್ಲಿ ಆಶ್ರಮಕ್ಕೆ ಸೇರಿದ್ದು 2014ರಲ್ಲಿ ಆಶ್ರಮದ ಅಧಿಕಾರಿಗಳು ಪೋನ್ ಮಾಡಿ ಸಂಗೀತಾ ಹೃದಯಾಘಾತವಾಗಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಆದರೆ ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು ಈ ಮೊದಲು ಆಶ್ರಮದಲ್ಲಿ ಮಗಳನ್ನು ಒಬ್ಬಂಟಿಯಾಗಿ ಭೇಟಿಯಾಗುವ ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿ ಸಾವಿನ ಕುರಿತು ಸಂಶಯ ವ್ಯಕ್ತ ಪಡಿಸಿ ಮೃತ ಯುವತಿಯ ಮನೆಯವರು ಈ ಕುರಿತು ದೂರು ದಾಖಲಿಸಿದ್ದರು.