ಚೆನ್ನೈ, ನ 27 (Daijiworld News/MSP): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಾರ್ಟೊಸ್ಯಾಟ್ -3 ಮತ್ತು ಅಮೆರಿಕದ 13 ಇತರ ನ್ಯಾನೊ ಉಪಗ್ರಹಗಳು ಸೇರಿದಂತೆ 14 ಉಪಗ್ರಹಗಳನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.
ಕಾರ್ಟೊಸ್ಯಾಟ್ -3 ಉಪಗ್ರಹ ನ.25ರಂದು ಉಡಾವಣೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಮುಂದೂಡಿ ಅದನ್ನು ಬುಧವಾರ ಬೆಳಗ್ಗೆ 09:28 ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದ ಎರಡನೇ ಉಡಾವಣಾ ಪ್ಯಾಡ್ನಿಂದ ಉಡಾವಣೆ ಮಾಡಲಾಗಿದೆ.
1625 ಕೆ.ಜಿ ತೂಕದ ಕಾರ್ಟೊಸ್ಯಾಟ್ ತನ್ನೊಂದಿಗೆ ಅಮೆರಿಕದ 13 ಕಮರ್ಷಿಯಲ್ ನ್ಯಾನೊ ಉಪಗ್ರಹಗಳನ್ನು ಕೂಡಾ ಪಿಎಸ್ಎಲ್ ವಿ -ಸಿ 47 ಹೊತ್ತೊಯ್ದಿದೆ.
ಕಾರ್ಟೊಸ್ಯಾಟ್ ಭೂಮಿಯ ಚಿತ್ರಣ ಮತ್ತು ಮ್ಯಾಪಿಂಗ್ ಉಪಗ್ರಹವಾಗಿದ್ದು, ಮೂರನೇ ಜನರೇಷನ್ ನ ಅತ್ಯಾಧುನಿಕ ಸ್ಯಾಟಲೈಟ್ ಆಗಿದ್ದು ಹೈ ರೆಸಲ್ಯೂಷನ್ ಇಮೇಜಿಂಗ್ ಸಾಮರ್ಥ್ಯ ಹೊಂದಿದೆ.