ಮೈಸೂರು, ನ 27 (Daijiworld News/MB) : ರಾಜ್ಯದ ರಾಜಕರಣದಲ್ಲೂ ಉಪಚುನಾವಣೆ ನಂತರ ಏನೂ ಬೇಕಾದರೂ ಬದಲಾವಣೆ ಆಗಬಹುದು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಇಲ್ಲಿ ಪತ್ರಿಕಾಗೋಷ್ಠೀ ನಡೆಸಿ ಮಾತಾನಾಡಿದ ಅವರು, ಮಹಾರಾಷ್ಟ್ರದಲ್ಲಿ ರಾಜಕೀಯದಲ್ಲಿ ಬದಲಾವಣೆ ಆಯಿತು. ಅದೇ ರೀತಿ ಕರ್ನಾಟಕದ ರಾಜಕರಣದಲ್ಲೂ ಬದಲಾವಣೆಯಾಗಲಿದೆ. ನಾವು ಸೋನಿಯಾ ಗಾಂಧಿಯವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ.
ಹೆಚ್.ಡಿ. ದೇವೇಗೌಡರು ಪರೋಕ್ಷವಾಗಿ ಉಪಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮತ್ತೆ ಮೈತ್ರಿಗೆ ಮಾಡಲಿದ್ದೇವೆ ಎಂದು ಹೇಳಿದ್ದಾರೆಯೇ ಎಂಬ ಪ್ರಶ್ನೆಯು ಮೂಡಿ ಬರುತ್ತಿದೆ.