ಬೆಂಗಳೂರು, ನ 27 (Daijiworld News/MSP):ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನಲೆಯಲ್ಲಿ ನ.27ರ ಬುಧವಾರ ಸಿಎಂ ಬಿ. ಎಸ್. ಯಡಿಯೂರಪ್ಪ ಆಸ್ಪತ್ರೆಯತ್ತ ದೌಡಾಯಿಸಿ ರಾಜ್ಯಪಾಲರ ಆರೋಗ್ಯ ವಿಚಾರಿಸಿದರು.
80 ವರ್ಷದ ವಜುಭಾಯಿ ವಾಲಾ ಅವರು ತೀವ್ರ ಅಸ್ವಸ್ಥರಾದ ಕಾರಣ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ರಾಜ್ಯಪಾಲರು ದಾಖಲಾಗಿರುವ ಹಿನ್ನಲೆಯಲ್ಲಿ ಆಸ್ಪತ್ರೆಯ ಸುತ್ತಮುತ್ತ ವಿಶೇಷ ಬಿಗಿಭದ್ರತೆ ಒದಗಿಸಲಾಗಿದೆ.
ಗುಜರಾತ್ ಮೂಲದ ವಜುಭಾಯಿ ವಾಲಾ 2014ರಿಂದ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿದ್ದ್ರು. ಅವರ ಅವಧಿ ಮಾರ್ಚ್ಗೆ ಮುಕ್ತಾಯಗೊಂಡಿದೆ. ಇನ್ನೂ ಹೊಸ ರಾಜ್ಯಪಾಲರನ್ನು ನೇಮಕವಾಗಿಲ್ಲ. ಗುಜರಾತ್ ರಾಜ್ಯದಲ್ಲಿ ಸ್ಪೀಕರ್ ಸೇರಿದಂತೆ ಶಾಸಕ, ಮಂತ್ರಿಯಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.