ರಾಜಸ್ಥಾನ, ನ 27 (Daijiworld News/MSP): ಗಂಡ ತನ್ನ 25 ವರ್ಷದ ಪತ್ನಿಗೆ ತಲಾಖ್ ನೀಡಿದ್ರೆ ಅದೇ ದಿನ ಸಂಜೆ ಮಾವ "ಇನ್ನು ನೀನು ತನ್ನ ಸೊಸೆಯಲ್ಲ" ಎಂದು ಹೇಳಿ ಇನ್ನಿಬ್ಬರ ಜೊತೆ ಸೇರಿ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಅಲ್ವಾರ್ ನ ಭಿವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ತನ್ನ ಪರಿಸ್ಥಿತಿ ವಿವರಿಸಿದ ಬಳಿಕ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಸ್ಲಿಂ ಸಂಪ್ರದಾಯದಂತೆ ತಂದೆ ವರದಕ್ಷಿಣೆ ನೀಡಿ 2015ರಲ್ಲಿ ಈಕೆಯನ್ನು ಚೌಪಂಕಿಯ ಯುವಕನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಮತ್ತಷ್ಟು ವರದಕ್ಷಿಣೆ ತರುವಂತೆ ಪತಿ ಮಾವ ಹಾಗೂ ಭಾವ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನವೆಂಬರ್ 22 ಪತಿ ತ್ರಿವಳಿ ತಲಾಖ್ ನೀಡಿರುವುದಾಗಿ ತಿಳಿಸಿದರು. ಅದೇ ದಿನ ಸಂಜೆ ಮಾವ ಹಾಗೂ ಇಬ್ಬರು ವ್ಯಕ್ತಿಗಳು ಕೋಣೆಯೊಳಗೆ ಬಂದು, "ನನ್ನ ಮಗ ನಿನಗೆ ತಲಾಖ್ ನೀಡಿದ್ದು ಇನ್ನು ನೀನು ನನ್ನ ಸೊಸೆಯಲ್ಲ ಎಂದು ತಿಳಿಸಿ, ಪಿಸ್ತೂಲ್ ಅನ್ನು ಹಣೆಗಿಟ್ಟು ಹೆದರಿಸಿ, ಮಾವ ಹಾಗೂ ಇನ್ನಿಬ್ಬರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಭಿವಾಡಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮತ್ತು ತ್ರಿವಳಿ ತಲಾಖ್ ಕಾನೂನಿನಡಿಯಲ್ಲಿ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಅಧೀಕ್ಷಕ ಭಿವಾಡಿ ಕುಮ್ವಟ್ ಹೇಳಿದ್ದಾರೆ.