ಭೋಪಾಲ್, ನ 27 (Daijiworld News/MB) :ಪತ್ನಿಯು ಪ್ರಿಯಕರನೊಂದಿಗೆ ವಿವಾಹವಾಗಲು ಪತಿ ಅವರಿಬ್ಬರನ್ನು ಒಂದು ಮಾಡುವಂತೆ ಕಥೆಗಳನ್ನು ಸಿನೆಮಾದಲ್ಲಿ ನೋಡಿದ್ದೇವೆ. ಆದರೆ ಇಂತಹದೇ ಒಂದು ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಪತ್ನಿಯು ಪ್ರಿಯಕರನೊಂದಿಗೆ ವಿವಾಹವಾಗಲು ಇಚ್ಛಿಸಿದಾಗ ಪತಿ ವಿಚ್ಛೇಧನ ನೀಡಿದ್ದಾನೆ. 7 ವರ್ಷಗಳ ಹಿಂದೆ ಸಂಗೀತಾ ಹಾಗೂ ಮಹೇಶ್ ವಿವಾಹವಾಗಿದ್ದರು. ಸಂಗೀತಾ ಫ್ಯಾಶನ್ ಡಿಸೈನರ್ ಆಗಿದ್ದರೆ ಮಹೇಶ್ ಸಾಫ್ಟವೇರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು ಸುಖಿ ಜೀವನ ಇವರದ್ದಾಗಿತ್ತು.
ಮದುವೆಯಾದ 7 ವರ್ಷಗಳ ನಂತರ ಸಂಗೀತಳಿಗೆ ತನ್ನ ಹಳೆ ಪ್ರಿಯಕರನ ಭೇಟಿಯಾಗಿದ್ದು ತನಗೆ ಮದುವೆಯಾದ ನಂತರ ಆತ ಯಾರನ್ನೂ ಮದುವೆಯಾಗಿಲ್ಲ ಎಂಬ ವಿಷಯ ತಿಳಿದು ಬಂದಿದ್ದು ಹಳೆಯ ಪ್ರೀತಿ ಮತ್ತೆ ಚಿಗುರಿದೆ. ಈ ಬಳಿಕ ಪತಿ ಪತ್ನಿಯರ ನಡುವೆ ಅಂತರ ಬೆಳೆದಿದೆ.
ಸಂಗೀತ ಮದುವೆಗಿಂತ ಮೊದಲು ಆತನನ್ನು ಪ್ರೀತಿಸುತ್ತಿದ್ದು ಜಾತಿ ಬೇರೆ ಎಂಬ ಕಾರಣಕ್ಕೆ ತಂದೆ ಮದುವೆಗೆ ಒಪ್ಪದೆ ಮಹೇಶ್ನ ಜೊತೆ ಮದುವೆ ಮಾಡಿದ್ದರು. ಪ್ರಿಯಕರನೊಂದಿಗೆ ಸಂಗೀತ ಮಾತಾನಾಡಲು ಆರಂಭ ಮಾಡಿದ ನಂತರ ಪತಿ ಪತ್ನಿ ನಡುವೆ ಅಂತರ ಬೆಳೆದಿದ್ದು ಈ ಕಾರಣದಿಂದಾಗಿ ಕೌನ್ಸೆಲಿಂಗ್ ಕೂಡಾ ಮಾಡಿಸಲಾಗಿತ್ತು. ಆದರೆ ಸಂಬಂಧವು ಸರಿಯಾಗಲಿಲ್ಲ. ಸಂಗೀತ ತನ್ನ ಪ್ರಿಯಕರನನ್ನು ಮದುವೆಯಾಗಲು ಬಯಸಿದ್ದು ಪತಿಯು "ಪತ್ನಿ ನನ್ನೊಂದಿಗೆ ಖುಷಿಯಾಗಿಲ್ಲ. ಅವಳು ಅವಳ ಪ್ರಿಯಕರನನ್ನು ಮದುವೆಯಾಗಲಿ. ಇದು ಮಕ್ಕಳ ಮೇಲೆ ಯಾವ ಕೆಟ್ಟ ಪರಿಣಾಮ ಬೀರಬಾರದು. ಆದ್ದರಿಂದ ಮಕ್ಕಳು ನನ್ನ ಜೊತೆ ಇರಲಿ. ಸಂಗೀತಾಳಿಗೆ ಮಕ್ಕಳನ್ನು ನೋಡಬೇಕೆನಿಸಿದಾಗ ನೋಡಲು ಬರಬಹುದು" ಎಂದು ಹೇಳಿ ವಿಚ್ಛೇಧನ ನೀಡಿದ್ದಾರೆ.