ಹೊಸನಗರ, ನ 28(Daijiworld News/MSP): ಪತ್ನಿಯ ಅಜಾಗರೂಕತೆ, ನಿರ್ಲಕ್ಷ್ಯದ ಚಾಲನೆಯಿಂದ ನಾವು ಪ್ರಯಾಣಿಸುತ್ತಿದ್ದ ಕಾರು ಅಪಘಾತ ನಡೆದಿದ್ದು ಕುಟುಂಬ ಸದಸ್ಯರು ಗಾಯಗೊಂಡಿದ್ದಾರೆ ಎಂದು ಹೆಬ್ರಿ ಮೂಲದ ನಾಗರಾಜ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೆಬ್ರಿ ಮೂಲದ ದಂಪತಿ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದಾಗ ಕಾರು ಹೊಸನಗರ ಸಮೀಪದ ಜಯನಗರದಲ್ಲಿ ಪಲ್ಟಿಯಾಗಿದೆ.ಹೆಬ್ರಿಯ ನಾಗರಾಜ್, ಅವರ ಪತ್ನಿ ಮಂಜುಳಾ, ಮಗ ಈಶಾನ್ ಹಾಗೂ ಮಂಜುಳಾರ ಅಕ್ಕಳ ಮಗಳು ಸುಪ್ರಭಾ ಅವರು ಕಾರಿನಲ್ಲಿದ್ದರು. ಕಾರನ್ನು ಮಂಜುಳಾ ಚಲಾಯಿಸುತ್ತಿದ್ದರು.
ಕಾರು ಚಲಾಯಿಸುವಾಗ ರಸ್ತೆಯ ಎಡಬದಿ ಬಿಟ್ಟು ವಾಹನವನ್ನು ಬಲಬದಿಗೆ ಬಂದು,ಸೇತುವೆಯಿಂದ ಕೆಳಕ್ಕೆ ಉರುಳಿದೆ. ತಕ್ಷಣ ನಾಗರಾಜ್ ಕಾರಿನಿಂದ ಇಳಿದು ಕಾರಿನಲ್ಲಿದ್ದ ಕುಟುಂಬಸ್ಥರನ್ನು ಹೊರ ತಂದಿದ್ದಾರೆ. ಕಾರು ಅಪಘಾತಕ್ಕೀಡಾದ ಪರಿಣಾಮ ಮಗ ಈಶಾನ್ ತಲೆಗೆ ಪೆಟ್ಟಾಗಿದ್ದು, ಸುಪ್ರಭಾಗೂ ಗಾಯಗಳಾಗಿವೆ.ಎಲ್ಲರರೂ ಆಸ್ಪತೆಗೆ ದಾಖಲಾಗಿದ್ದು, ಹೀಗಾಗಿ ಕಾರು ಚಲಾಯಿಸುತ್ತಿದ್ದ ಪತ್ನಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಹೊಸನಗರ ಠಾಣೆಯಲ್ಲಿ ನಾಗರಾಜ್ ದೂರು ನೀಡಿದ್ದು
್ಪ್ರಕರಣ ದಾಖಲಾಗಿದೆ.