ನವದೆಹಲಿ, ನ 28(Daijiworld News/MSP): ನೀವು ಶಾಪಿಂಗ್ ಮಳಿಗೆಗಳಲ್ಲಿ ಸಾಮಾಗ್ರಿ ಖರೀದಿ ಮಾಡಿ ಬಳಿಕ ಕ್ಯಾರಿ ಬ್ಯಾಗ್ ಗೆ ಪ್ರತ್ಯೇಕ ಶುಲ್ಕ ಪಾವತಿ ಚೀಲ ಪಡೆದುಕೊಂಡಿದ್ರೆ ಈ ಸುದ್ದಿ ನೀವು ಓದಲೇಬೇಕು. ಯಾಕೆಂದರೆ, ಮಳಿಗೆಯವರು ಪ್ರತ್ಯೇಕವಾಗಿ ಗ್ರಾಹಕರಿಂದ ಕ್ಯಾರಿ ಬ್ಯಾಗ್ ಗೆ ಹಣ ವಸೂಲಿ ಮಾಡುವಂತಿಲ್ಲ.!
ಗ್ರಾಹಕನಿಂದ ಕ್ಯಾರಿ ಬ್ಯಾಗ್ ಗೆ ಪ್ರತ್ಯೇಕವಾಗಿ ಹಣ ವಸೂಲಿ ಮಾಡಿದ್ದಕ್ಕಾಗಿ ಗ್ರಾಹಕ ವೇದಿಕೆ ಬಿಗ್ ಬಜಾರ್ ಗೆ 11,500ರೂ. ದಂಡ ಪಾವತಿಸುವಂತೆ ತಿಳಿಸಿದೆ. ಇದರಲ್ಲಿ 10,000 ಈ ಹಣವನ್ನು ಗ್ರಾಹಕ ಕಾನೂನು ನೆರವು ಖಾತೆಗೆ ಜಮಾ ಮಾಡುವಂತೆ ಹೇಳಿದ್ರೆ ದಂಡ ರೂಪದಲ್ಲಿ ಗ್ರಾಹಕನಿಗೆ 500 ರೂಪಾಯಿ ನೀಡುವಂತೆ ಸೂಚಿಸಲಾಗಿದೆ. ಇದರೊಂದಿಗೆ ಗ್ರಾಹಕನಿಗೆ ಮಾನಸಿಕ ಹಿಂಸೆ ನೀಡಿದ ಕಾರಣ ೧೦೦೦ ರೂ ಹಾಗೂ ಕ್ಯಾರಿ ಬ್ಯಾಗ್ ಗೆ ವಸೂಲಿ ಮಾಡಿದ 18 ರೂಪಾಯಿಯನ್ನು ಮರುಪಾವತಿ ಮಾಡುವಂತೆ ಸೂಚಿಸಲಾಗಿದೆ.
ಘಟನೆ ಹಿನ್ನಲೆ: ದೂರಿನಲ್ಲಿ ತಿಳಿಸಿರುವಂತೆ 2019 ರ ಮಾರ್ಚ್ 20 ರಂದು ಈ ಘಟನೆ ನಡೆದಿದ್ದು, ಪಂಚಕುಲ ನಿವಾಸಿ ಬಲದೇವ್ ರಾಜ್ ಅವರು ಬಿಗ್ ಬಜಾರ್ಗೆ ಸಾಮಾಗ್ರಿ ಖರೀದಿಸಲೆಂದು ಹೋಗಿದ್ದರು ಬಿಲ್ಲಿಂಗ್ ಕೌಂಟರ್ ನಲ್ಲಿದ್ದ ಸಿಬ್ಬಂದಿ ಬ್ಯಾಗ್ಗಾಗಿ ಪ್ರತ್ಯೇಕವಾಗಿ 18 ರೂ. ನೀಡುವಂತೆ ಕೇಳಿದ್ದರು. ತಕ್ಷಣ ಇದು ಕಾನೂನುಬಾಹಿರ ಎಂದು ಬಲದೇವ್ ತಿಳಿಹೇಳಿದಾಗ ಸಿಬ್ಬಂದಿ ಇದನ್ನು ನಿರಾಕರಿಸಿ ಕ್ಯಾರಿ ಬ್ಯಾಗ್ಗೆ ಪ್ರತ್ಯೇಕ ಹಣ ನೀಡಲೇ ಬೇಕು ಎಂದು ಪಟ್ಟು ಹಿಡಿದಿದ್ದರು.
ಇದರಿಂದಾಗಿ ತೊಂದರೆಗೀಡಾದ ಬಲದೇವ್ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿದ್ದಾರೆ. ಈ ವೇಳೆ ಕ್ಯಾರಿ ಬ್ಯಾಗ್ ಶುಲ್ಕಗಳ ಬಗ್ಗೆ ಮಳಿಗೆಯಲ್ಲಿ ಪ್ರದರ್ಶಿಸಲಾಗಿದ್ದು, ಅದರ ಬಗ್ಗೆ ಗ್ರಾಹಕರಿಗೆ ತಿಳಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ. ವಿಚಾರಣೆ ನಡೆಸಿದ ಗ್ರಾಹಕ ರಕ್ಷಣಾ ವೇದಿಕೆ ಬಿಗ್ ಬಜಾರ್ ಗೆ ದಂಡ ವಿಧಿಸಲಾಗಿದೆ. ಗ್ರಾಹಕರ ವೇದಿಕೆ ಪ್ರಕಾರ, ಬ್ರಾಂಡ್ ಉತ್ತೇಜನ ನೀಡಲು ಬಳಸುವ ಕ್ಯಾರಿ ಬ್ಯಾಗ್ ಗೆ ಪ್ರತ್ಯೇಕ ಶುಲ್ಕ ವಿಧಿಸುವಂತಿಲ್ಲ. ಇದರ ವಿರುದ್ಧ ಯಾವುದೇ ಗ್ರಾಹಕ ದೂರು ನೀಡಬಹುದು ಎಂದು ತಿಳಿಸಿದೆ.