ಬೆಂಗಳೂರು, ನ 28(Daijiworld News/MB) : "ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿ ಅಡುಗೆ ಮನೆಯ ಡಬ್ಬಿಯಲ್ಲಿರುವ ಹಣವನ್ನೂ ಖರ್ಚು ಮಾಡುವಂತಹ ಪರಿಸ್ಥಿತಿ ಬಂದಿದೆ. ರಿಸರ್ವ್ ಬ್ಯಾಂಕ್ ನಲ್ಲಿದ್ದ ಫಂಡ್ ನ್ನು ಈಗಾಗಲೇ ಬಳಕೆ ಮಾಡುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ಬಂಗಾರವನ್ನೂ ಒತ್ತೆ ಇಡುವ ಪರಿಸ್ಥಿತಿ ಮುಂದೆ ಬರುತ್ತದೆ" ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
"ಕೇಂದ್ರ ಸರಕಾರ ಸಾರ್ವಜನಿಕ ಉದ್ಯಮಿಗಳನ್ನೂ ಖಾಸಗಿಕರಣ ಮಾಡುತ್ತಿದ್ದಾರೆ. ವಿದೇಶಿ ಕಂಪನಿಗಳಿಗೆ ಪೆಟ್ರೋಲ್ ಕಂಪನಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವ ಸಾರ್ವಜನಿಕ ಕಂಪನಿಗಳನ್ನು ಖಾಸಗಿಕರಣಗೊಳಿಸಿಲಾಗಿದೆ ಎಂದು ಶ್ವೇತ ಪತ್ರ ಹೊರಡಿಸಬೇಕು ಮತ್ತು ಯಾರ ಬೇನಾಮಿ ಹೆಸರಿನಲ್ಲಿದೆ ಬಹಿರಂಗ ಪಡಿದಬೇಕು" ಎಂದು ಖಾದರ್ ಒತ್ತಾಯಿಸಿದ್ದಾರೆ.
"ಮಹಾರಾಷ್ಟ್ರದಲ್ಲಿ ಬಿಜೆಪಿಯವರು ರಾತ್ರೋ ರಾತ್ರಿ ಪ್ರಮಾಣ ವಚನ ಸ್ವೀಕರಿಸುವ ಅಗತ್ಯ ಏನಿತ್ತು? ಹರಿಯಾಣದಲ್ಲಿ ಬಿಜೆಪಿಯವರಿಗೆ ಬೆಂಬಲ ಕೊಟ್ಟರೆ ಕುಟುಂಬದವರನ್ನು ಬೇಲ್ ಮೇಲೆ ಬಿಡುಗಡೆ ಮಾಡುತ್ತಾರೆ. ದೇಶದಲ್ಲಿ ಯಾವ ಸರ್ಕಾರ ನಡೆಯುತ್ತಿದೆ. ಪ್ರಜಾಪ್ರಭುತ್ವದ ಸರ್ಕಾರ ಇದೀಯಾ ಹಿಟ್ಲರ್ ಸರ್ಕಾರ ನಡೆಯುತ್ತಿದೆಯಾ ಎನ್ನುವುದನ್ನು ತಿಳಿಯಬೇಕು" ಎಂದು ಹೇಳಿದರು.
"ಬಿಜೆಪಿ ಚುನಾವಣೆಯಲ್ಲಿ ಪಾಕಿಸ್ತಾನ ತೋರಿಸಿ ಮತ ಕೇಳಬೇಕಷ್ಟೆ. ತಾವು ಮಾಡಿದ ಸಾಧನೆಯನ್ನು ತೋರಿಸಿ ಬಿಜೆಪಿಯವರು ಮತ ಪಡೆಯುವ ಪರಿಸ್ಥಿತಿ ಇಲ್ಲ. ಅವರು ಜನರ ಮುಂದೆ ಭಾವನಾತ್ಮಕ ವಿಷಯ ಇಟ್ಟು ಚುನಾವಣೆಯಲ್ಲಿ ಜಯ ಗಳಿಸುತ್ತಿದ್ದಾರೆ" ಎಂದು ಹೇಳಿದರು.
"ರಾಜ್ಯ ಸರಕಾರವನ್ನು ದೂರಿ ಮಾತಾನಾಡಿದ ಅವರು, ರಾಜ್ಯದಲ್ಲಿ ಜನ ವಿರೋಧಿ ಸರ್ಕಾರವಿದೆ. ಫಲಾನುಭವಿಗಳಿಗೆ ನೀಡಿರುವ ಚೆಕ್ ಬೌನ್ಸ್ ಆಗುತ್ತಿವೆ . ಇವರ ಖಾಸಗಿ ಬಂಡವಾಳಶಾಹಿಗಳ ಪರವಾದ ನಿಲುವನ್ನು ಜನರು ಎಂದಿಗೂ ಒಪ್ಪುವುದಿಲ್ಲ. ರಾಜ್ಯದ ಜನರು ಚುನಾವಣೆಯಲ್ಲಿ ಹರಿಯಾಣ, ಮಹಾರಾಷ್ಟ್ರದ ರೀತಿಯಲ್ಲಿ ತೀರ್ಪು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಬೇಕು" ಎಂದು ಹೇಳಿದರು.
"ಅಲ್ಪ ಸಂಖ್ಯಾತ ನಾಯಕರು ಅವರು ಕಾರ್ಯ ನಿರ್ವಹಿಸ ಬೇಕಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಬಿಜೆಪಿಯಿಂದ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳನ್ನು ಸುಪ್ರೀಂಕೋರ್ಟ್ ಅನರ್ಹರು ಯೋಗ್ಯತೆ ಇಲ್ಲ ಎಂದು ಹೇಋಳಿರುವುದರಿಂದ ಜನರು ತಮ್ಮ ಮತವನ್ನು ಅವರಿಗೆ ಹಾಕಬಾರದು" ಎಂದು ಜನರಲ್ಲಿ ಮನವಿ ಮಾಡಿದರು.