ಹೈದರಬಾದ್, ನ 29 (Daijiworld News/MSP): ಕೆಲಸಕ್ಕೆಂದು ಹೊರಟ ಪಶು ವೈದ್ಯೆಯ ದೇಹ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಅಕೆಯನ್ನು ಹತ್ಯೆ ಮಾಡಲಾಯಿತೇ ಎನ್ನುವ ಅನುಮಾನಗಳು ದಟ್ಟವಾಗತೊಡಗಿದ್ದು ವೈದ್ಯೆಯ ಹತ್ಯೆಯ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು ನ್ಯಾಯಕ್ಕಾಗಿ ಒತ್ತಾಯಿಸಿ #RIPPriyankaReddy ಎಂಬ ಅಭಿಯಾನ ಪ್ರಾರಂಭವಾಗಿದೆ.
ಪಶುವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ 26 ವರ್ಷದ ಪ್ರಿಯಾಂಕ ರೆಡ್ಡಿ ಬುಧವಾರ ರಾತ್ರಿ ಪಾಳಿಗೆ ಕೆಲಸಕ್ಕೆಂದು ತೆಲಂಗಾಣ ಶೆಡ್ ನಗರದಲ್ಲಿರುವ ತಮ್ಮ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಅವರ ವಾಹನ ಪಂಕ್ಚರ್ ಆಗಿದೆ. ಇದರಿಂದ ವಿಚಲಿತರಾದ ಪ್ರಿಯಾಂಕ ರೆಡ್ದಿ ರಾತ್ರಿ 9:15 ಸುಮಾರಿಗೆ ಸೋದರಿ ಭವ್ಯಗೆ ಪೋನ್ ಕರೆಮಾಡಿ ಮಾತನಾಡಿದ್ದು, ಗಾಡಿ ಪಂಕ್ಚರ್ ಆಗಿರುವುದನ್ನು ತಿಳಿಸಿದ್ದಾರೆ. ಮಾತ್ರವಲ್ಲದೇ ಅಪರಿಚಿತ ಗಂಡಸರು ಮತ್ತು ಬಹಳಷ್ಟು ಟ್ರಕ್ಗಳು ನಿಂತಿವೆ. ನನಗೆ ಭಯವಾಗುತ್ತಿದೆ ಎಂದು ಸಹೋದರಿಗೆ ತಿಳಿಸಿದ್ದಳು. ಅದಕ್ಕೆ ಸಹೋದರಿಯು, ‘ ವಾಹನ ಅಲ್ಲೇ ಬಿಟ್ಟು ಮನೆಗೆ ಹಿಂತಿರುಗು ಎಂದಿದ್ದಾರೆ.
ಇದೇ ವೇಳೆ ಕೆಲವರು ನಿಮ್ಮ ಟೈರ್ ಪಂಕ್ಚರ್ ಆಗಿದೆ, ನೀವು ಮುಂದೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಹಿಂದಿನಿಂದ ಬೊಬ್ಬೆ ಹಾಕುತ್ತಾ ಬಂದರು. ಆ ಬಳಿಕ ಬಸ್ ಸ್ಟ್ಯಾಂಡ್ ಹತ್ತಿರ ರಿಪೇರಿ ಮಾಡಿಸಬಹುದು ಎಂದು ನಾನು ಯೋಚನೆ ಮಾಡಿದರೂ ಅವರು ಬಿಡಲಿಲ್ಲ. ಗಾಡಿಯಿಂದ ಇಳಿಸಿ ರಿಪೇರಿಗೆ ಹುಡುಗರನ್ನು ಕರೆಸಿದರು. ಆದರೆ ಆ ಹುಡುಗರು ಎಲ್ಲಾ ಅಂಗಡಿ ಬಂದ್ ಆಗಿದೆ ಎಂದು ಹಿಂತಿರುಗಿದರು'' ಎಂದು ಪ್ರಿಯಾಂಕಾ ಸೋದರಿ ಭವ್ಯಗೆ ಕಡೆಯ ಬಾರಿಗೆ ಫೋನ್ ನಲ್ಲಿ ತಿಳಿಸಿದ್ದಾರೆ. ಸಹೋದರಿ ಭವ್ಯ ಮತ್ತೆ ಕರೆ ಮಾಡಿದಾಗ ಸ್ವೀಚ್ ಆಫ್ ಆಗಿತ್ತು.
ರಾತ್ರಿ 9.22ಕ್ಕೆ ಮಾತನಾಡಿದ್ದ ಪ್ರಿಯಾಂಕ 9.44 ರ ಹೊತ್ತಿಗೆ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಾವು ಟೋಲ್ ಗೇಟ್ ಬಳಿ ಹೋದಾಗ ಅಲ್ಲಿ ಪ್ರಿಯಾಂಕಾ ಇರಲಿಲ್ಲ. ಹತ್ತಿರ ಅಂಗಡಿಯಲ್ಲಿ ವಿಚಾರಿಸಿ ಸುತ್ತಮುತ್ತ ಹುಡುಕಾಡಿ ಎಲ್ಲೂ ನಮಗೆ ಕಾಣಿಸದಿದ್ದಾಗ ಪೊಲೀಸರಲ್ಲಿ ಸಹಾಯ ಯಾಚಿಸಿ ದೂರು ನೀಡಿದೆವು ಎಂದು ಸಹೋದರಿ ವಿವರಿಸಿದ್ದಾರೆ.
ಇನ್ನೊಂದೆಡೆ ಬುಧವಾರ ರಾತ್ರಿ ಕಣ್ಮರೆಯಾಗಿದ್ದ ವೈದ್ಯೆ ಗುರುವಾರ ಸಂಜೆ ಅವರ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆಕೆಯನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಲಾಗಿದೆ. ಪ್ರಿಯಾಂಕ ಧರಿಸಿದ್ದ ಲಾಕೆಟ್ ಅವರ ಗುರುತಿಗೆ ಸಹಾಯವಾಗಿದೆ. ಈ ಪ್ರಕರಣದಲ್ಲಿ ಕಾಲೇಜ್ ವಿದ್ಯಾರ್ಥಿಯೊಬ್ಬನನ್ನು ಹೈದರಾಬಾದ್ ಪೋಲಿಸರು ಗುರುವಾರ ಬಂಧಿಸಿದ್ದಾರೆ. ಪ್ರಕರಣ ಭೇದಿಸಲು 10 ತಂಡಗಳನ್ನು ರಚಿಸಲಾಗಿದೆ. ವೈದ್ಯೆಯ ದ್ವಿಚಕ್ರ ವಾಹನ ಇನ್ನೂ ಪತ್ತೆಯಾಗಿಲ್ಲ.
ಸಹೋದರಿಯೊಂದಿಗೆ ಮಾತನಾಡಿದ ಪ್ರಿಯಾಂಕ ರೆಡ್ಡಿಯ ಕೊನೆಯ ಕರೆ :