ನವದೆಹಲಿ, ನ 29 (Daijiworld News/MSP): ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡಿ ಬಿಜೆಪಿ ಪಕ್ಷಕ್ಕೆ ತೀವ್ರ ಇರುಸುಮುರಿಸು ತಂದಿದ್ದ ಸಂಸದೆ ಪ್ರಗ್ಯಾ ಠಾಕೂರ್ ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ಸಂಸತ್ ಕಲಾಪದಲ್ಲಿ ಮಾತನಾಡುತ್ತಾ " ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಕ್ಷಮೆಯಾಚಿಸುತ್ತೇನೆ, ದೇಶಕ್ಕೆ ಮಹಾತ್ಮಾ ಗಾಂಧಿ ನೀಡಿದ್ದ ಕೊಡುಗೆಯನ್ನು ನಾನು ಗೌರವಿಸುತ್ತೇನೆ ಆದರೆ ನಾನು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಲಾಗಿದೆ" ಎಂದು ಹೇಳಿದ್ದಾರೆ.
ನನ್ನ ಹೇಳಿಕೆಯನ್ನು ವಿರೂಪಗೊಳಿಸಿ ಪ್ರಕಟಿಸಲಾಗಿದೆ ಎಂದು ದೂರಿದ ಅವರು ಸಂಸತ್ತಿನ ಸದಸ್ಯೆಯಾಗಿರುವ ನನ್ನನ್ನು ಭಯೋತ್ಪಾದಕಿ ಎಂದು ಉಲ್ಲೇಖಿಸಿದ್ದನ್ನು ನಾನು ಆಕ್ಷೇಪಿಸುತ್ತೇನೆ ಶುಕ್ರವಾರ ಸಂಸತ್ ಕಲಾಪದಲ್ಲಿ ಭಾಗಿಯಾಗಿ ಹೇಳಿದ್ದಾರೆ.
ಬುಧವಾರ ಸಂಸತ್ತಿನಲ್ಲಿ ಗೋಡ್ಸೆ ದೇಶಭಕ್ತ ಎಂಬರ್ಥದಲ್ಲಿ ಮಾತನಾಡಿದ್ದ ಠಾಕೂರ್ ವಿವಾದ ಸೃಷ್ಟಿಸಿದ್ದರು. ಸ್ಪೀಕರ್ ಅವರು ಠಾಕೂರ್ ಹೇಳಿಕೆಯನ್ನು ಕಡತದಿಂದ ಅಳಿಸಿಹಾಕಿದ್ದರು. ಈ ಹೇಳಿಕೆಯನ್ನು ಬಿಜೆಪಿ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್. ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಖಂಡಿಸಿದ್ದರು.
ಅವರ ಹೇಳಿಕೆ ವಿರೋಧಿಸಿ ಲೋಕಸಭೆಯಲ್ಲಿ ವಿಪಕ್ಷಗಳು ಭಾರೀ ಗದ್ದಲ ಏರ್ಪಡಿಸಿದ್ದವು. ಇನ್ನೊಂದೆಡೆ ಈ ವಿವಾದ ತರಾಕಕ್ಕೇರುತ್ತಿರುವಂತೆ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿಯಿಂದ ವಜಾಮಾಡಿತ್ತು.