ಹಾವೇರಿ, ನ.29(Daijiworld News/SS): ಉಪಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ. ಯಾರು ಏನೇ ಹೇಳಿದ್ರೂ ಮತದಾರರು ನಮ್ಮ ಪರವಾಗಿದ್ದಾರೆ. ಈಗಾಗಲೇ ಹದಿನೈದು ಕ್ಷೇತ್ರಗಳನ್ನು ಗೆದ್ದಾಗಿದೆ. ಗೆಲುವಿನ ಅಂತರಕ್ಕಾಗಿ ನಾವು ಪೈಪೋಟಿ ಮಾಡ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಪುನರುಚ್ಚಿಸಿದರು.
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಿಎಂ ಯಡಿಯೂರಪ್ಪ, ನಮಗೆ ಬಹುಮತ ಬಂದೇ ಬರುತ್ತದೆ. ಬೇರೆಯವರು ಸರಕಾರ ರಚಿಸುವ ಪ್ರಮೆಯವೇ ಬರೋದಿಲ್ಲ. ಇನ್ನೂ ಮೂರೂವರೆ ವರ್ಷ ನಾನೇ ಸಿಎಂ. ನಮಗೆ ಯಾರ ಸಹಕಾರವೂ ಬೇಡ. ನಾವು ಈಗಾಗಲೇ 15 ಕ್ಷೇತ್ರಗಳನ್ನು ಗೆದ್ದಾಗಿದೆ. ಗೆಲುವಿನ ಅಂತರಕ್ಕೆ ಮಾತ್ರ ನಾವು ಕಾಯುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಪ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ರಾಜಕೀಯ ನಾಯಕರ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಇದೇ ರೀತಿ ಹಾವೇರಿಯಲ್ಲಿ ಪ್ರಚಾರ ಮಾಡಲು ಆಗಮಿಸಿದ ಸಿಎಂ ಯಡಿಯೂರಪ್ಪ, 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.