ಬೆಂಗಳೂರು, ನ.29(Daijiworld News/SS): ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಕಣ್ಣೀರು ಹಾಕೋದು ನಮ್ಮ ಕುಟುಂಬದ ಪೇಟೆಂಟ್. ನಾವು ಬಡ ಕುಟುಂಬದಿಂದ ಬಂದವರು. ಬಿಜೆಪಿಯವರ ಹಾಗೆ ಚಿನ್ನದ ಚಮಚ ಇಟ್ಟುಕೊಂಡು ಬೆಳೆದಿಲ್ಲ. ಬಡವರನ್ನು ನೋಡಿದಾಗ ನಮಗೆ ಕಣ್ಣೀರು ಬರುತ್ತದೆ. ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಹಾಗಾಗಿ ಅವರಿಗೆ ಕಣ್ಣೀರು ಬರಲ್ಲ ಎಂದು ಕುಮಾರಸ್ವಾಮಿ ತಮ್ಮ ಕಣ್ಣೀರಿಗೆ ವಿಶ್ಲೇಷಣೆ ನೀಡಿದರು.
ಸೋಮಣ್ಣ ಯಾರ ಯಾರ ಕಾಲಿಗೆ ಯಾವ್ಯಾವಾಗೆಲ್ಲಾ ಬಿದ್ದಿದ್ದಾರೆ ಎನ್ನೋದು ಗೊತ್ತಿದೆ. ನಿಮಗೆ ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಜನತಾ ಬಜಾರ್ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡವರು ಸೋಮಣ್ಣ. ಈ ವಯಸ್ಸಿನಲ್ಲಿ ದೇವೇಗೌಡರು ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಿಮ್ಮ ಹಾಗೆ ಪಕ್ಷದಲ್ಲಿ ಬೆಳೆದು ಆ ಮೆಲೆ ಆ ಪಕ್ಷಕ್ಕೆ ದ್ರೋಹ ಮಾಡಿಲ್ಲ” ಎಂದು ಸೋಮಣ್ಣರನ್ನು ಹೆಚ್ಡಿಕೆ ಟೀಕಿಸಿದರು.