ಮಹಾರಾಷ್ಟ್ರ, ನ 30 (Daijiworld News/MSP): ಮಹಾರಾಷ್ಟ್ರದ ಧುಲೆ ಜಿಲ್ಲೆಯ ವಿಂಚೂರ್ ಗ್ರಾಮದಲ್ಲಿ ಪಿಕಪ್ ವಾಹನವೊಂದು ಸೇತುವೆಯಿಂದ ಕೆಳಕ್ಕೆ ಉರುಳಿ 7 ಜನ ಸಾವನ್ನಪ್ಪಿದ್ದು , 24 ಮಂದಿ ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ 12.30 ರ ವೇಳೆಗೆ ನಡೆದಿದೆ.
ಅಪಘಾತಕ್ಕೆ ಒಳಗಾದ 24 ಜನರಲ್ಲಿ ಐವರ ಸ್ಥಿತಿ ಗಂಬೀರವಾಗಿದೆ ಎಂದು ವರದಿಯಾಗಿದೆ. ವಿಂಚೂರ್ ಗ್ರಾಮದಲ್ಲಿರುವ ಭೋರಿ ನದಿ ಮೇಲೆ ಸಾಗುತ್ತಿದ್ದ ಪಿಕಪ್ ವಾಹನ ಸೇತಿವೆಯಿಂದ ಕೆಳಕ್ಕೆ ಉರುಳಿದೆ. ಗಾಯಾಳುಗಳನ್ನೆಲ್ಲಾ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನದಲ್ಲಿದ್ದವರು ಮಧ್ಯಪ್ರದೇಶದ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಧುಲೆಯಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಕಬ್ಬು ಕಟಾವು ಮಾಡಲೆಂದು ಪರಿವಾರ ಸಮೇತ ಗುಳೆ ಬಂದಿದ್ದರು ಎನ್ನಲಾಗಿದೆ.