ನವದೆಹಲಿ, ನ 30 (Daijiworld News/MB) : ಲೋಕಸಭೆಯಲ್ಲಿ ಗೋಡ್ಸೆ ದೇಶ ಭಕ್ತ ಎಂದು ಹೇಳಿಕೆ ನೀಡಿದ್ದ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ರಾಹುಲ್ ಗಾಂಧಿಯವರು ಭಯೋತ್ಪಾದಕಿ ಎಂದು ಹೇಳಿದ್ದು "ಈ ಹೇಳಿಕೆಗೆ ನಾನು ಬದ್ಧ ಇದಕ್ಕೆ ಸಂಬಂಧಿಸಿ ಯಾವುದೇ ಕ್ರಮವನ್ನು ಎದುರಿಸಲು ನಾನು ಸಿದ್ಧ " ಎಂದು ಐಸಿಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ನಾಥೂರಾಮ್ ಗೋಡ್ಸೆ ರೀತಿಯಲ್ಲೇ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಹಿಂಸಾಚಾರದ ಮೇಲೆ ನಂಬಿಕೆ ಹೊಂದಿದ್ದಾರೆ. ನಾನು ಈಗಲೂ ಪ್ರಗ್ಯಾ ಸಿಂಗ್ ಠಾಕೂರ್ ಅವರ ಕುರಿತಾದ ನನ್ನ ಹೇಳಿಕೆಗೆ ಬದ್ಧನಾಗಿದ್ದು ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ, ನಾನು ಅವರ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ಮಾಧ್ಯಮಗಳಿಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ನವೆಂಬರ್ 27ರ ಬುಧವಾರ ಲೋಕಸಭೆಯಲ್ಲಿ ಗೋಡ್ಸೆ ದೇಶ ಭಕ್ತ ಎಂದು ಹೇಳಿದ್ದು ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯಿಂದ ಕೈ ಬಿಡಲಾಗಿತ್ತು. ಈ ಕುರಿತು ಪ್ರಗ್ಯಾ ಠಾಕೂರ್ ಅವರು ಕ್ಷಮೆ ಕೋರಿದ್ದಾರೆ.