ಬೆಂಗಳೂರು, ನ 30(Daijiworld News/MSP): ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಎಲ್ಲಿದ್ದಾನೆ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ. ನಿತ್ಯಾನಂದ ಅವಧಿ ಮುಗಿದ ಪಾಸ್ಪೋರ್ಟ್ ನವೀಕರಿಸದಿದ್ದರೂ ನಕಲಿ ಪಾಸ್ ಪೋರ್ಟ್ ಬಳಸಿ ಪರಾರಿಯಾಗಿರುವ ಸಾಧ್ಯತೆ ಇದೆ. ಆದರೆ ನಿತ್ಯಾನಂದ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಸಚಿವಾಲಯ ಹೇಳಿದೆ.
ಇನ್ನೊಂದೆಡೆ ಜನಾರ್ಧನ ಶರ್ಮ ಎಂಬುವವರು ತಮ್ಮ ಮಗಳ ವಿಚಾರವಾಗಿ ಹೆಬಿಯಸ್ ಕಾರ್ಪಸ್ ಹಾಕಿರುವ ಹಿನ್ನಲೆಯಲ್ಲಿ ಗುಜರಾತ್ ಪೊಲೀಸರು ಬಿಡದಿಯ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಸರ್ಚ್ ವಾರೆಂಟ್ ಹಿನ್ನೆಲೆ ನಿತ್ಯಾನಂದ ಆಶ್ರಮಕ್ಕೆ ಪೊಲೀಸರು ಬಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದು, ಅಮೆರಿಕಾ ಸಮೀಪದ ಬಿಲೀಜ್ ದ್ವೀಪದಲ್ಲಿದ್ದಾನೆ ಎನ್ನಲಾಗಿದೆ. ಈ ಹಿಂದೆ ಈತ ಅಪ್ರೀಕಾದ ಈಕ್ವೆಡಾರ್ ಪ್ರದೇಶದಲ್ಲೂ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ದೊರಕಿತ್ತು.
ಆಶ್ರಮದಲ್ಲೇ ಅಲ್ಪಸ್ವಲ್ಪ ಉಳಿದುಕೊಂಡಿರುವ ಒಂದಷ್ಟು ಭಕ್ತರು ವಿಚಾರಿಸಿದ್ರೆ 'ದೀರ್ಘ ತಪಸ್ಸಿಗಾಗಿ ನಿತ್ಯಾನಂದ ಸ್ವಾಮಿಗಳು ತೆರಳಿದ್ದಾರೆ ಎಂದು ಹೇಳುತ್ತಿದ್ದಾರೆ.