ಹೈದರಬಾದ್, ನ 30 (Daijiworld News/MB) : ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರು ಶವ ದೊರೆತ ಪ್ರದೇಶದಲ್ಲಿ ಇನ್ನೋರ್ವ ಮಹಿಳೆಯ ಶವ ಅರೆಬೆಂದ ಸ್ಥತಿಯಲ್ಲಿ ಪತ್ತೆಯಾಗಿದ್ದು ಎರಡು ಹತ್ಯೆಗಳು ಒಂದೇ ರೀತಿಯಲ್ಲಿ ನಡೆದಿರುವ ಸಾಧ್ಯೆತೆ ಇದೆ ಎಂದು ಪೊಲೀಸರು ತಿಳಿಸಿದ್ದು ಈಗ ಇನ್ನೋರ್ವ ಮಹಿಳೆಯ ಶವ ಹತ್ಯೆಗೈದು ಸುಟ್ಟಿರುವುದಲ್ಲ, ಅದು ಆತ್ಮಹತ್ಯೆ ಎಂದು ಪೊಲೀಸರು ಹೇಳಿದ್ದಾರೆ.
ನವೆಂಬರ್ ೨೮ರ ಗುರುವಾರ ಪಶುವೈದ್ಯ ಪ್ರಿಯಾಂಕ ಅವರ ಶವ ಅರೆಬೆಂದ ಸ್ಥಿತಿಯಲ್ಲಿ ಹೈದರಾಬಾದ್ ಸಮೀಪ ಶಂಶಾಬಾದ್ ನಗರದ ಹೊರ ವಲಯದ ಅಂಡರ್ ಬ್ರಿಡ್ಜ್ ಕೆಳಗೆ ದೊರೆತಿತ್ತು. ಅದೇ ಜಾಗದ ಸನಿಹದಲ್ಲಿ ಇನ್ನೋರ್ವ ಮಹಿಳೆಯ ಮೃತದೇಹ ದೊರೆತಿತ್ತು. ಪೊಲೀಸರು ಆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಪ್ರಿಯಾಂಕ ಶವ ದೊರೆತ ನಂತರ ದೊರೆತಿರುವ ಶವ ಹತ್ಯೆಗೈದು ಸುಟ್ಟಿರುವುದಲ್ಲ. ಆತ್ಮಹತ್ಯೆಯಾಗಿದೆ. ಆವವಾಗಿ ದೊರೆತಿರುವ 35 ವರ್ಷದ ಮಹಿಳೆಯು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದು ತನಗೆ ತಾನೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸಿಸಿಟಿವಿಯ ಪರಿಶೀಲನೆ ನಡೆಸಲಾಗಿದ್ದು ಈ ಮಹಿಳೆ ಶುಕ್ರವಾರ ಸಂಜೆ ದೇವಸ್ಥಾನದ ಬಳಿಗೆ ಬ್ಯಾಗ್ ಒಂದನ್ನು ಹಿಡಿದುಕೊಂಡು ಹೋಗಿರುವುದು ಕಂಡುಬಂದಿದೆ. ಪೆಟ್ರೋಲ್ ಅನ್ನು ಆ ಬ್ಯಾಗ್ ನಲ್ಲಿ ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೇ ಆ ಸಮಯದಲ್ಲಿ ಆಕೆ ಹಿಂದಿಯಲ್ಲಿ ಮಾತನಾಡುತ್ತಾ ಅಳುತ್ತಿದ್ದಳು ಎಂದು ಆಕೆಯನ್ನು ನೋಡಿದ್ದ ಸ್ಥಳೀಯರು ಹೇಳಿದ್ದಾರೆ. ಆದ್ದರಿಂದ ಈ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಉತ್ತರ ಭಾರತ ಮೂಲದವಳಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ನಾವು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದ್ದರೂ ನಾವು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದೇವೆ. ಮರಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಮರಣೋತ್ತರ ಪರೀಕ್ಷೆಯ ನಂತರ ನೀಡಲಾಗುವುದು. ಆಕೆ ಯಾರು ಎಂಬುದನ್ನು ಸಿಸಿಟಿವಿ ದೃಶ್ಯವನ್ನು ಪರಿಶೀಲನೆ ನಡೆಸಿ ಪತ್ತೆ ಹಚ್ಚುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಈ ಮೊದಲು ತೆಲಂಗಾಣದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯವರ ಶವ ದೊರೆತಿದ್ದು ನಾಲ್ವರು ದುಷ್ಕರ್ಮಿಗಳು ಬೈಕ್ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಆಕೆಯನ್ನು ಆತ್ಯಾಚಾರ ಮಾಡಿ ಹತ್ಯೆ ಮಾಡಿ ಸುಟ್ಟು ಹಾಕಿದ್ದರು. ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಇನ್ನೊಂದು ಶವ ಪತ್ತೆಯಾಗಿ ಅನುಮಾನಕ್ಕೆ ಕಾರಣವಾಗಿತ್ತು.