ಹೈದ್ರಾಬಾದ್ ನ 30(Daijiworld News/MSP): ಪಶುವೈದ್ಯೆಯನ್ನು ಅತ್ಯಾಚಾರ ನಡೆಸಿ ಅಮಾನುಷವಾಗಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಶಡ್ನಾಗರ್ ಮ್ಯಾಜಿಸ್ಟೇಟ್ ಆದೇಶ ನೀಡಿದ್ದಾರೆ.
ನ್ಯಾಯಾಧೀಶರು ಅಲಭ್ಯವಾದ ಹಿನ್ನಲೆಯಲ್ಲಿ ಆರೋಪಿಗಳನ್ನು ಫಾಸ್ಟ್ಟ್ರಾಕ್ ನ್ಯಾಯಾಲದ ಮುಂದೆ ಹಾಜರುಪಡಿಸಿರಲಿಲ್ಲ. ಅಲ್ಲದೆ ಪ್ರಕರಣ ಕುರಿತು ನಗರ ಉದ್ವಿಗ್ನ ಸ್ಥಿತಿಯಲ್ಲಿದ್ದು, ಈ ಹಿನ್ನಲೆಯಲ್ಲಿ ನ್ಯಾಯಾಧೀಶರೇ ಶಂಶಾದಾಬಾದ್ ಠಾಣೆಗೆ ಆಗಮಿಸುವ ಸ್ಥಿತಿ ನಿರ್ಮಾಣವಾಗಿತ್ತು. ಆರೋಪಿಗಳನ್ನು ಬಂಧಿಸಿದ್ದ ಠಾಣೆಗೆ ಹಾಜರಾದ ಮಂಡಲ್ ಎಕ್ಸುಕ್ಯೂಟಿವ್ ಮ್ಯಾಜಿಸ್ಟೇಟರ್ ಆರೋಪಿಗಳನ್ನು ಎರಡು ವಾರ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಇನ್ನೊಂದೆಡೆ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಪ್ರತಿಭಟನಕಾರರು ಘೋಷಣೆ ಕೂಗುತ್ತಿದ್ದಾರೆ. ಈ ನಡುವೆ ಆರೋಪಿಗಳಾದ ಮೊಹಮ್ಮದ್ ಆರಿಫ್, ಚಿಂತಕುಂಟ ಚೆನ್ನಕೇಶವಲು, ಜೊಲು ಶಿವ, ಜೊಲು ನವೀನ್ರನ್ನು ಮೆಹಬೂಬ್ನಗರ ಜೈಲಿಗೆ ಸ್ಥಳಾಂತರಿಸಲಾಗಿದೆ. ಆದರೆ ಶಂಶಾದಾಬಾದ್ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಉದ್ರಿಕ್ತರು, ವಿದ್ಯಾರ್ಥಿಗಳು, ಸ್ಥಳೀಯರು ಆರೋಪಿಯನ್ನು "ವಿಚಾರಣೆ ನಡೆಸದೇ ತಕ್ಷಣ ಗಲ್ಲಿಗೆ ಏರಿಸಬೇಕು. ಇಲ್ಲವಾದರೆ ತಮ್ಮ ವಶಕ್ಕೆ ಒಪ್ಪಿಸಬೇಕು" ಎಂದು ಘೋಷನೆ ಕೂಗುತ್ತಿದ್ದಾರೆ. ಪ್ರತಿಭಟನೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಚ್ ಮಾಡಿ ಜನರನ್ನು ಚದುರಿಸುವ ಯತ್ನ ಮಾಡಿದ್ದಾರೆ.