ಬೆಂಗಳೂರು, ನ.30(Daijiworld News/SS): ಉಪಚುನಾವಣೆಯಲ್ಲಿ ಬಿಜೆಪಿ ಆರಕ್ಕಿಂತ ಕಡಿಮೆ ಸ್ಥಾನ ಬಂದರೆ ಬಿಜೆಪಿ ಸರ್ಕಾರಕ್ಕೆ ತೊಂದರೆಯಾಗಲಿದೆ ಎಂದು ಮಾಜಿ ಗೃಹ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲೀಗ ಆಯಾರಾಮ್ ನರೇಂದ್ರ ಮೋದಿ, ಗಯಾರಾಮ್ ಅಮಿತ್ ಷಾ. ಇನ್ನು ಕೆಲವು ದಿನಗಳಲ್ಲಿ ಈ ಆಯಾರಾಮ್ ಗಯಾರಾಮ್ರಿಗೆ ರಾಜ್ಯ ಸೇರಿದಂತೆ ದೇಶದ ಜನರು ತಕ್ಕ ಪಾಠ ಕಲಿಸುವುದು ಖಚಿತ ಎಂದು ದೂರಿದ್ದಾರೆ.
1985ರಲ್ಲಿ ಆಯಾರಾಮ್ ಗಯಾರಾಮ್ ಪದ್ಧತಿಗೆ ಕಡಿವಾಣ ಹಾಕಲು ಪಕ್ಷಾಂತರ ನೀತಿ ಕಾಯಿದೆ ತಂದರು. ಕಾಂಗ್ರೆಸ್ ಎಂದಿಗೂ ಸ್ಟ್ರೇಟ್ ಆಪರೇಷನ್ ಆಗಲಿ ರಿವರ್ಸ್ ಆಪರೇಷನ್ ಆಗಲಿ ಎಂದಿಗೂ ಮಾಡುವುದಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಆರಕ್ಕಿಂತ ಕಡಿಮೆ ಸ್ಥಾನ ಬಂದರೆ ಬಿಜೆಪಿ ಸರ್ಕಾರಕ್ಕೆ ತೊಂದರೆಯಾಗಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಗಯಾರಾಮ್ ಪಕ್ಷಾಂತರಕ್ಕೆ ಪ್ರೋತ್ಸಾಹಕ್ಕೆ ನೀಡುವ ನಾಯಕರಿವರು. ಮೋದಿ ಒಬ್ಬ ಒಳ್ಳೆಯ ಭಾಷಣಕಾರ ಮಾತ್ರವೇ ಹೊರತು ಒಳ್ಳೆಯ ಆಡಳಿತಗಾರನಲ್ಲ. ಅಮಿತ್ ಷಾ ಏನೂ ಅಲ್ಲ. ಅವರ ಬಗ್ಗೆ ಒಳ್ಳೆಯ ಜನಾಭಿಪ್ರಾಯವಿಲ್ಲ ಎಂದು ಹೇಳಿದರು.