ರಾಮನಗರ, ಡಿ 1 (Daijiworld News/MB) : ಅಕ್ರಮ ಬಂಧನ ಆರೋಪದಲ್ಲಿ ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದನನ್ನು ಹುಡುಕುತ್ತಿರುವ ಗುಜರಾತ್ ರಾಜ್ಯ ಪೊಲೀಸರು ಬಿಡದಿಯ ಧ್ಯಾನಪೀಠ ಆಶ್ರಮದಲ್ಲೂ ಶೋಧ ನಡೆಸಿರುವುದಾಗಿ ವರದಿಯಾಗಿದೆ.
ಬೆಂಗಳೂರು ಮೂಲದ ಪೋಷಕರು ತಮ್ಮ ಮಕ್ಕಳನ್ನು ಅಕ್ರಮ ಬಂಧನದಲ್ಲಿ ಇರಿಸಿದ್ದ ಆರೋಪದಲ್ಲಿ ಗುಜರಾತ್ ಹೈಕೋರ್ಟ್ ಮೆಟ್ಟಿರೇರಿದ್ದು, ಅಕ್ರಮ ಬಂಧನದಲ್ಲಿದ್ದ ಮಕ್ಕಳನ್ನು ಬಂಧನ ಮುಕ್ತಗೊಳಿಸಲಾಗಿತ್ತು. ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ನಿತ್ಯಾನಂದನ ವಿರುದ್ಧ ಸರ್ಚ್ ವಾರೆಂಟ್ ಹೊರಡಿಸಿದ್ದು ಪೊಲೀಸರು ಆಶ್ರಮಕ್ಕೆ ತೆರಳಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಅಲ್ಲಿಯೂ ಸಿತ್ಯಾನಂದನ ಸುಳಿವು ಪತ್ತೆಯಾಗಿಲ್ಲ.
ಈ ಕುರಿತು ಹಿರಿಯ ಅಧಿಕಾರಿಗಳು ವರ್ಷಗಳಿಂದಲೂ ನಿತ್ಯಾನಂದ ಬಿಡದಿ ಆಶ್ರಮದಲ್ಲಿಲ್ಲ. ಆತ ದೇಶದಲ್ಲಿಯೇ ಇಲ್ಲ. ರಾಮನಗರದ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆಗೂ ಹಾಜರಾಗಿಲ್ಲ ಎಂದು ಹೇಳಿದ್ದಾರೆ.