ಹುಬ್ಬಳ್ಳಿ, ಡಿ 1 (Daijiworld News/MB) : ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆಂದು ಹಸಿ ಸುಳ್ಳು ಹೇಳುತ್ತಿದ್ದಾರೆ. ಯಾವ ಆಧಾರ ಮೇಲೆ ತಾನು ಮುಖ್ಯಮಂತ್ರಿಯಾಗುವುದಾಗಿ ಹೇಳುತ್ತಿದ್ದಾರೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ. ಬಿಜೆಪಿ ಸರ್ಕಾರ ಡಿ.9 ರಂಉ ಕೆಳಗುರುಳುತ್ತದೆ ಎಂದು ಹೇಳುತ್ತಾರೆ. ಡಿ.9 ಬಂದರೆ ಎಲ್ಲವೂ ತಿಳಿಯುತ್ತದೆ ಎಂದು ವ್ಯಂಗ್ಯ ಮಾಡಿದರು.
ಹಾಗೆಯೇ ಮಹಾರಾಷ್ಟ್ರ ದರಕಾರದ ಕುರಿತು ಮಾತಾನಾಡಿದ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಬಗ್ಗೆ ಅಲ್ಲಿನ ಮುಖಂಡರು ತೀರ್ಮಾನ ಕೈಗೊಂಡಿದ್ದರು. ಅದು ನನ್ನ ಪ್ರಕಾರ ತಪ್ಪು. ಶಿವಸೇನೆ ಸದ್ಯ ಆಪರೇಷನ್ ಗೆ ಒಳಗಾಗಿದ್ದು ಎನ್ ಸಿಪಿ,ಕಾಂಗ್ರೆಸ್ ಆಪರೇಷನ್ ಮಾಡಿದೆ. ಇದು ಶರದ್ ಪವಾರ್ ಗೆ ಹೊಸತೇನಲ್ಲ. “ಜೈಸಾ ಮಾಮಾ ವೈಸಾ ಬತಿಜಾ” ಎನ್ನುವ ಘೋಷನೆ ಶುರುವಾಗಿದೆ. ಗೋವಾ ಸರ್ಕಾರ ಸುಭದ್ರವಾಗಿದೆ ಎಂದು ತಿಳಿಸಿದ್ದಾರೆ.