ಹುಬ್ಬಳ್ಳಿ, ಡಿ 1 (Daijiworld News/MB) : ಉಪಚುನಾವಣೆಯಲ್ಲಿ ನಾವು 15ರಲ್ಲಿ 15 ಕ್ಷೇತ್ರಗಳಲ್ಲೂ ಜಯಗಳಿಸುತ್ತೇವೆ. ನಾವು ಗೆದ್ದಲ್ಲಿ ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ? ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು ಕಾಂಗ್ರೆಸ್ ನಾಯಕರು ಈಗ ಭ್ರಮನಿರಸರಾಗಿದ್ದಾರೆ. ತಮಮ್ಮ ಕೈಯಿಂದ ಅಧಿಕಾರ ತಪ್ಪಿದ್ದರಿಂದ ಹತಾಶೆಗೊಂಡ ಅವರು ಸರಕಾರ ಉರುಳುವುದಾಗಿ ಜನರಿಗೆ ಹೇಳುತ್ತಿದ್ದಾರೆ ಎಂದರು.
ಸರಕಾರ ಬೀಳುವುದೆಂದು ಸುಳ್ಳು ಹೇಳುತ್ತಿರುವ ಇವರು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಸುಳ್ಳು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸಬಹುದಉ ಎಂದು ಭಾವಿಸಿದ್ದಾರೆ. ಉಪಚುನಾವಣೆ ಮುಗಿದ ಬಳಿಕ ಯಾರು ಅಧಿಕಾರ ಪಡೆಯುತ್ತಾರೆ ಎಂಬುದು ಅವರಿಗೆ ಗೊತ್ತಾಗುತ್ತದೆ ಎಂದು ತಿಳಿಸಿದರು.