ಉತ್ತರ ಪ್ರದೇಶ, ಡಿ 1 (Daijiworld News/MB) : ಈರುಳ್ಳಿ ಬೆಲೆ ಗಗನಕ್ಕೇರುತ್ತಲ್ಲೇ ಇರುವುದರಿಂದ ಈರುಳ್ಳಿಗೂ ಲೋನ್ ಕೊಡ್ತಾರಂತೆ. ಅದು ಕೂಡಾ ಪ್ರಧಾನಿ ನರೆಂದ್ರ ಮೋದಿ ಕ್ಷೇತ್ರದಲ್ಲಿ.
ಈರುಳ್ಳಿ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರಧಾನಿ ಮೋದಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಯುವಮೋರ್ಚಾ ಘಟಕ ವಿನೂತನವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು ಅದೇ ಈರುಳ್ಳಿಗೂ ಲೋನ್ ನೀಡುವ ಆಫರ್.
ಈ ಪ್ರತಿಭಟನೆಯ ಭಾಗವಾಗಿ ವಾರನಾಸಿಯಲ್ಲಿ ಪ್ರತ್ಯೇಕ ಕೌಂಟರ್ ನ್ನು ತೆರೆಯಲಾಗಿದ್ದು, ಅಲ್ಲಿ ಆಧಾರ್ ಕಾರ್ಡ್ ನ್ನು ಅಡವಿಟ್ಟು ಈರುಳ್ಳಿ ಪಡೆಯಬಹುದಾಗಿದೆ.
ಈ ಕುರಿತು ಮಾತಾನಾಡಿರುವ ಸಮಾಜವಾದಿ ಪಕ್ಷದ ಕಾರ್ಯಕರ್ತರು ಈ ಪ್ರತಿಭಟನೆಯನ್ನು ಈರುಳ್ಳಿ ಬೆಲೆ ಏರಿಕೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ರೀತಿಯ ಕೌಂಟರ್ಗಳನ್ನು ತೆರೆಯಲಾಗಿದೆ. ಆ
ಕೌಂಟರ್ಗಳಲ್ಲಿ ಆಧಾರ್ ಕಾರ್ಡ್ ಅಥವಾ ಬೆಳ್ಳಿ ಆಭರಣಗಳನ್ನು ಅಡವಿಟ್ಟು ಈರುಳ್ಳಿ ನೀಡಲಾಗುತ್ತದೆ. ಕೆಲವು ಅಂಗಡಿಗಳಲ್ಲಿ ಈರುಳ್ಳಿಯನ್ನು ಲಾಕರ್ ಗಳಲ್ಲಿಯೂ ಇಡಲಾಗಿದೆ ಎಂದು ಹೇಳಿದ್ದಾರೆ.