ನವದೆಹಲಿ, ಡಿ 2 (Daijiworld News/MB) : ಕಾಂಗ್ರೆಸ್ ನಾಯಕ ಪ್ರಿಯಾಂಕ ಗಾಂಧಿಗೆ ಜಯಕಾರ ಹಾಕುವ ಬದಲು ಪ್ರಿಯಾಂಕ ಗಾಂಧಿಗೆ ಜಯಕಾರ ಹಾಕಿದ ವಿಡಿಯೋ ವೈರಲ್ ಆಗಿದ್ದು ಈಗ ಟ್ರೋಲ್ಗೆ ಒಳಗಾಗಿದೆ.
ಯಾರ್ಲಿಯಲ್ಲಿ ನಡೆದ ಈ ಅಚಾತುರ್ಯದ ವಿಡಿಯೋ ವೈರಲ್ ಆಗಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಅಷ್ಟು ಮಾತ್ರವಲ್ಲದೇ ಈ ವಿಡಿಯೋ ವೈರಲ್ ಆದ ನಂತರ ಪ್ರಿಯಾಂಕ ಚೋಪ್ರಾ ಟ್ವಿಟರ್ನಲ್ಲಿ ಟ್ರೆಂಡ್ ಆಗಿದ್ದಾರೆ.
ಘೋಷಣೆಯನ್ನು ಕೂಗಿ ನೆರೆದ ಜನರಲ್ಲಿ ಘೋಷಣೆಯನ್ನು ಕೂಗಲು ಸನ್ನೆ ಮಾಡುವ ಕಾಂಗ್ರೆಸ್ ನಾಯಕ ಸುರೇಂದ್ರ ಕುಮಾರ್, "ಸೋನಿಯಾ ಗಾಂಧಿ ಜಿಂದಾಬಾದ್, ಕಾಂಗ್ರೆಸ್ ಪಕ್ಷ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್, ಪ್ರಿಯಾಂಕಾ ಚೋಪ್ರಾ ಜಿಂದಾಬಾದ್" ಎಂದು ಘೋಷಣೆ ಕೂಗಿ ನಂತರ ತಪ್ಪಾಯಿತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ದೆಹಲಿ ಘಟಕದ ಮುಖ್ಯಸ್ಥ ಸುಭಾಷ್ ಚೋಪ್ರಾ ಅವರು ಸುರೇಂದ್ರ ಅವರ ತಪ್ಪಿನ್ನು ಅರಿತು ಘೋಷಣೆಗೆ ಪ್ರತಿಕ್ರಿಯೆ ಮಾಡದೆ ತಪ್ಪನ್ನು ಸುರೇಂದ್ರ ಅವರಿಗೆ ತಿಳಿಸಿದ್ದಾರೆ.
ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಟ್ವೀಟಿಗರು ಪ್ರಿಯಾಂಕ ಚೋಪ್ರಾ ಇದಕ್ಕಿಂತ ಹೆಚ್ಚಿನದ್ದನ್ನೇ ಸಾಧಿಸಿದ್ದರೆ ಎಂದು ಹೇಳಿದ್ದು ಇನ್ನೋರ್ವ ಟ್ವೀಟಿಗ ಕಾಂಗ್ರೆಸ್ ಪಕ್ಷ ಎಂದಿಗೂ ಅವಿವೇಕಿ ಪಕ್ಷ. ನಮ್ಮನ್ನು ಮನರಂಜನೆ ಮಾಡುವಲ್ಲಿ ಅವರೆಂದಿಗೂ ವಿಫಲರಾಗುವುದಿಲ್ಲ ಎಂದಿದ್ದಾರೆ.