ಬೆಂಗಳೂರು, ಡಿ 2 (Daijiworld News/MB) : ಉಪಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಪ್ರಚಾರವೂ ಅತೀ ಬಿರುಸಾಗಿ ಸಾಗುತ್ತಿದೆ. ಈ ನಡುವೆ ನಾಯಕರುಗಳ ಹೇಳಿಕೆಗಳು ಕುತೂಹಲ ಮೂಡಿಸುತ್ತಿದೆ.
ಈಗ ಮಾಜಿ ಸಚಿವ ಎಂ.ಬಿ ಪಾಟೀಲ್, ಈಗ ಇರುವ ಸರಕಾರ ಇದೆಯೋ ಇಲ್ಲವೋ ಎನ್ನುವಂತಾಗಿದೆ. ಈ ತಿಂಗಳ ಅಂತ್ಯದೊಳಗೆ ಮತ್ತೆ ಭಾಗ್ಯಗಳ ಸರ್ಕಾರ ಬರಲಿದೆ. ಸೂಕ್ಷ್ಮವಾಗಿ ಗಮನಿಸಿದರೆ ಮತ್ತೆ ರಾಜ್ಯದಲ್ಲಿ ಸಿದ್ದರಾಮಯ್ಯವನರು ಮುಖ್ಯಮಂತ್ರಿ ಆಗುವ ಲಕ್ಷಣಗಳು ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತ ಬಿಜೆಪಿ ನಾಯಕರುಗಳು 15ಕ್ಷೇತ್ರದಲ್ಲೂ ನಾವೇ ಗೆಲುವು ಸಾಧಿಸುತ್ತೇವೆ ಎಂದು ಹೇಳುತ್ತಿದ್ದಾರೆ.