ಮಂಡ್ಯ, ಡಿ 2(Daijiworld News/MSP): ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನಲೆಯಲ್ಲಿ ಅಬಕಾರಿ ಆಯುಕ್ತರು ಜಿಲ್ಲಾಯಾದ್ಯಂತ ನಡೆಸಿದ ಕಾರ್ಯಚರಣೆಯಲ್ಲಿ ಮದ್ಯ ಮತ್ತು ಸೇಂದಿಯನ್ನು ಜಪ್ತು ಮಾಡಲಾಗಿದೆ.
ಮೈಸೂರು ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನ ಅನ್ವಯ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ನವೆಂಬರ್ 30 ರಂದು 39 ಕಡೆ ಮತ್ತು ಡಿಸೆಂಬರ್ 1 ರಂದು 38 ಕಡೆ ಸೇರಿ ಒಟ್ಟು 77 ಕಡೆ ದಾಳಿ ಮಾಡಲಾಯಿತು.
ದಾಳಿಯಲ್ಲಿ 5 ಘೋರ, 6 ಸಾಮಾನ್ಯ ಹಾಗೂ ಕಲಂ 15 ಅನ್ವಯ 34 ಪ್ರಕರಣಗಳನ್ನು ದಾಖಲಿಸಿ, 58.069ಲೀ ಮದ್ಯ, 1.950 ಲೀ ಬಿಯರ್, 65.000ಲೀ. ಸೇಂದಿ ಮತ್ತು 1 ದ್ವಿಚಕ್ರ ವಶಪಡಿಸಿಕೊಳ್ಳಲಾಗಿದೆ.