ನವದೆಹಲಿ, ಡಿ 03 (Daijiworld News/MSP): ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಅಪ್ಪಳಿಸಿ ಪತನವಾದ ಸ್ಥಳವನ್ನು ನಾಸಾ ಕೊನೆಗೂ ಪತ್ತೆ ಹಚ್ಚಿದ್ದು, ಈ ಸ್ಥಳದ ಪೋಟೋವನ್ನು ವಿಕ್ರಮ್ ಲ್ಯಾಂಡರ್ ಹಂಚಿಕೊಂಡಿದೆ.
ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್ (ಎಲ್ಆರ್ಒ) ಮೂಲಕ ತೆಗೆದ ಚಿತ್ರವನ್ನು ನಾಸಾ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಚಿತ್ರದಲ್ಲಿ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳ ಮತ್ತು ಅದಕ್ಕೆ ಸಂಬಂಧಿತ ಛಿದ್ರವಾಗಿರುವ ಕ್ಷೇತ್ರಗಳು ಪತ್ತೆಯಾಗಿರುವುದು ಕಂಡು ಬಂದಿದೆ. ಅಲ್ಲದೆ, ಲ್ಯಾಂಡರ್'ನ ಭಾಗಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿದ್ದುಕೊಂಡಿರುವುದು ತಿಳಿದುಬಂದಿದೆ
ವಿಕ್ರಮ್ ಲ್ಯಾಂಡರ್ ಪತನಗೊಂಡಿದ್ದ ಸ್ಥಳದ ಮೊಸಾಕ್ ಚಿತ್ರವನ್ನು ಸೆ.26ರಂದು ನಾಸಾ ಬಿಡುಗಡೆ ಮಾಡಿತ್ತು. ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದ ವಾಯುವ್ಯ ಭಾಗದ ಸುಮಾರು 750 ಕಿಮೀ ದೂರದಲ್ಲಿ ವಿಕ್ರಮ್ ಲ್ಯಾಂಡರ್'ನ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿತ್ತು. ಶಣ್ಮುಗ ಸುಬ್ರಮಣ್ಯಂ ಎಂಬ ವ್ಯಕ್ತಿ ಎಲ್ಆರ್'ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಪತ್ತೆಹಚ್ಚಿದ್ದರು.