ನವದೆಹಲಿ, ಡಿ 03 (Daijiworld News/MSP): ಹೈದರಾಬಾದ್ ಮೂಲದ ಸಂಸ್ಥೆಯೊಂದರಿಂದ ಕಾಂಗ್ರೆಸ್ ಪಕ್ಷದ ಬೊಕ್ಕಸಕ್ಕೆ ಹಣ ವರ್ಗಾವಣೆಯಾದ ಸಂಬಂಧಪಟ್ಟಂತೆ ದಾಖಲೆ ಒದಗಿಸಲು ವಿಫಲವಾದ ಕಾಂಗ್ರೆಸ್ಗೆ ಆದಾಯ ತೆರಿಗೆ ಇಲಾಖೆಯು (ಐಟಿ) ಸೋಮವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಐಟಿ ಇಲಾಖೆಯೂ ನವೆಂಬರ್ 4ರಂದು ದಾಖಲೆಗಳನ್ನು ಒದಗಿಸುವಂತೆ ಕಾಂಗ್ರೆಸ್ನ ಹಿರಿಯ ಪದಾಧಿಕಾರಿಗಳಿಗೆ ಸಮನ್ಸ್ ಜಾರಿಯಾಗಿತ್ತು. ಆದರೆ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದರು.
ಇತ್ತೀಚೆಗೆ ಐಟಿ ಇಲಾಖೆ ನಡೆಸಿದ ದಾಳಿ ಸಂದರ್ಭ ಹೈದರಾಬಾದ್ ಮೂಲದ ಮೂಲಸೌಕರ್ಯ ಸಂಸ್ಥೆಯು ಹವಾಲಾ ಮಾರ್ಗದ ಮೂಲಕ ಕಾಂಗ್ರೆಸ್ಗೆ 170 ಕೋಟಿ ಹಣವನ್ನು ವರ್ಗಾಯಿಸಿತ್ತು ಎಂಬ ಮಾಹಿತಿ ದೊರಕಿತ್ತು. ಈ ಹವಾಲ ಹಣವನ್ನು ಸರ್ಕಾರಿ ಯೋಜನೆಗಳಲ್ಲಿ ಬೋಗಸ್ ಬಿಲ್ಗಳನ್ನು ಮಾಡುವ ಮೂಲಕ ನೀಡಲಾಗಿದೆ ಎನ್ನುವ ಅಂಶ ಇಲಾಖೆ ಕಂಡುಹುಡುಕಿತ್ತು. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಕಂಪನಿಗೆ ಸರ್ಕಾರವು ನಿಗಧಿಪಡಿಸಿದ್ದ ಯೋಜನೆಗಳಲ್ಲಿ ಹೆಚ್ಚಾಗಿ ನಕಲಿ ಬಿಲ್ಗಳನ್ನು ಮಾಡಲಾಗಿದೆ ಎಂಬ ಸಂಗತಿ ಆದಾಯ ತೆರಿಗೆ ಇಲಾಖೆಗೆ ತಿಳಿದುಬಂದಿತ್ತು.