ಹಾವೇರಿ, ಡಿ 3 (Daijiworld News/MB) : ಮಾನಸಿಕ ಹಾಗೂ ಶಾರೀರಕವಾಗಿ ದುರ್ಬಲವಾದ ಅಪ್ರಾಪ್ತ (14) ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ನಾಗಪ್ಪ ಮಾಲಿಕೇರಿಗೆ ಜೀವಾವಧಿ ಕಾರಾಗೃಹವಾಸ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಒಂದನೇ ಅಧಿಕ ಜಿಲ್ಲಾ ಹಾಗೂ ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಸೋಮವಾರ ತೀರ್ಪು ನೀಡಿದ್ದಾರೆ.
ಬ್ಯಾಡಗಿ ತಾಲೂಕು ಬೆಳಕೇರಿ ಗ್ರಾಮದ ಆರೋಪಿ ನಾಗಪ್ಪ ಶಿವಪ್ಪ ಮಾಲಿಕೇರಿ ಅದೇ ಗ್ರಾಮದ ಮಾನಸಿಕ ಹಾಘೂ ಶಾರೀರಕವಾಗಿ ದುರ್ಬಲವಾದ ಅಪ್ರಾಪ್ತ ಬಆಲಕಿಯ ಮೇಲೆ ಎಸಗಿದ್ದು ಆತನ ವಿರುದ್ಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗೆ ಪೋಕ್ಸೋ ಖಾಯ್ದೆಯಡಿ ಜೀವಾವಧಿ ಹಾಗೂ 50 ಸಾವಿರ ರೂ. ದಂಡ ವಿಧಿಸಿದ್ದು ದಂಡ ಪಾವತಿಸಲಾಗದಿದ್ದಲ್ಲಿ ಪುನಃ ದಂಡ ಅಥವಾ ಸಜೆ ವಿಸ್ತರಿಸಬಹುದಾದ ತೀರ್ಪು ನೀಡಲಾಗಿದೆ. ದಂಡದ ಮೊತ್ತದಲ್ಲಿ ಸಂತ್ರಸ್ಥೆಗೆ 20,000 ನೀಡಲು ನ್ಯಾಯಾಲಯ ಆದೇಶಿಸಿದೆ.
ತನಿಖೆ ನಡೆಸಿದ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಚಿದಾನಂದ ಅವರು ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಸರಕಾರದ ಪರವಾಗಿ (ಪೋಕ್ಸೋ) ವಿಶೇಷ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ವಿನಾಯಕ ಪಾಟೀಲ ಅವರು ವಾದ ಮಂಡಿಸಿದರು.