ನವದೆಹಲಿ, ಡಿ 3 (Daijiworld News/MB) : 3,300 ಕೋಟಿ ರೂಪಾಯಿ ಮೊತ್ತದ ಬೃಹತ್ ಹವಾಲಾ ಹಗರಣದ ತನಿಖೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವೂ ಸಂಸ್ಥೆಯೊಂದರಿಂದ ದೇಣಿಗೆ ಪಡೆದಿದೆ ಎಂದು ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೋಟಿಸು ಜಾರಿಗೊಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
3,300 ಕೋಟಿ ರೂಪಾಯಿ ಮೊತ್ತದ ಹವಾಲಾ ಹಗರಣ ಮತ್ತು ಹೈದಾರಾಬಾದ್ ಮೂಲದ ಸಂಸ್ಥೆಯೊಂದು ತೆರಿಗೆ ವಂಚನೆಯ ಕ್ರಮವಾಗಿ 170 ಕೋಟಿ ರೂಪಾಯಿ ಮೊತ್ತವನ್ನು ಕಾಮಗ್ರೆಸ್ ಪಕ್ಷಕ್ಕೆ ದೇಣಿಗೆಯಾಗಿ ನೀಡಿದೆ ಎಂದು ಆದಾಯ ತೆರಿಗೆ ಇಲಾಖೆಗಳು ತಿಳಿಸಿದೆ. ಬೃಹತ್ ಉದ್ಯಮ ಸಂಸ್ಥೆಗಳು ತೆರಿಗೆ ಒಪ್ಪಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿ, ಮುಂಬೈ ಮತ್ತು ಹೈದಾರಾಬಾದ್ನಲ್ಲಿ ಸರಣಿ ದಾಳಿ ನಡೆಸಿದ್ದರು. ಈವೇಳೆ ಈ ಹಗರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.