ಗಾಝಿಯಾಬಾದ್, ಡಿ 3 (Daijiworld News/MB): ಉದ್ಯಮಿ ಒರ್ವ ಮಕ್ಕಳಿಬ್ಬರ ಕತ್ತು ಸೀಳಿ ಪತ್ನಿ ಹಾಗೂ ಸಹೋದ್ಯೋಗಿಯೊಂದಿಗೆ ಕಟ್ಟಡದಿಂದ ಕೆಳಗೆ ಹಾರಿ ಆತ್ಮಾಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಇಂದಿರಾಪುರಂನ ವೈಭವ್ಖಂಡ್ನ ಅಪಾರ್ಟ್ಮೆಂಟಿನಲ್ಲಿ ನಡೆದಿದೆ.
ಆತ್ಮಾಹತ್ಯೆ ಮಾಡಿಕೊಂಡ ವ್ಯಕ್ತಿ ಗುಲ್ಶಾನ್ ಎಂದು ಗುರುತಿಸಲಾಗಿದ್ದು ಇವರು ಜೀನ್ಸ್ ಉತ್ಪಾಧನೆ ಉದ್ಯಮ ನಡೆಸುತ್ತಿದ್ದರು. ವ್ಯವಹಾರದಲ್ಲಾದ ನಷ್ಟವೇ ಆತ್ಮಾಹತ್ಯೆಗೆ ಕಾರಣ ಎಂದು ಇಲ್ಲಿನ ಪೊಲೀಸರು ಹೇಳಿದ್ದಾರೆ.
ಮೃತ ವ್ಯಕ್ತಿ “ನಮ್ಮ ಸಾವಿಗೆ ರಾಖೇಶ್ ಶರ್ಮ ಕಾರಣವಾಗಿದ್ದು, ನಮ್ಮೆಲ್ಲರ ಅಂತ್ಯ ಸಂಸ್ಕಾರ ಜೊತೆಯಾಗಿ ಮಾಡಬೇಕು” ಎಂದು ಅಪಾರ್ಟ್ಮೆಂಟ್ನ ಗೋಡೆಯಲ್ಲಿ ಬರೆದಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.