ಬಾಗಲಕೋಟೆ, ಡಿ 4 (Daijiworld News/ MB) : ವ್ಯಾಪಾರ ಹೆಚ್ಚಿಸುವ ಪ್ರಯತ್ನದಲ್ಲಿರುವ ಬಾಗಲಕೋಟೆಯ ಹೋಟೆಲ್ವೊಂದು ಈರುಳ್ಳಿ ಫ್ರೀ ನೀಡುವ ಆಫರ್ ಅನ್ನು ಆರಂಭ ಮಾಡಿದೆ.
ಈರುಳ್ಳಿ ಬೆಲೆ ಹೆಚ್ಚಿತ್ತಿರುವಾಗ ಅದನ್ನೇ ತನ್ ವ್ಯಾಪಾರದ ಅಸ್ತ್ರವನ್ನಾಗಿ ಬಳಸಿಕೊಂಡ ಹೋಟೆಲ್ 500 ರೂಪಾಯಿಯ ಫುಡ್ ಆರ್ಡರ್ ಮಾಡಿದರೆ 1 ಕೆಜಿ ಈರುಳ್ಳಿ ಉಚಿತ ನೀಡಲು ಮುಂದಾಗಿದೆ. ಗ್ರಾಹಕರನ್ನು ತಮ್ಮತ್ತ ಸೆಳೆಯಲು ಅಂಗಡಿಗಳಲ್ಲ ಹೊಟೇಲ್ಗಳಲ್ಲಿ ವಿವಿಧ ರೀತಿಯ ಆಫರ್ಗಳನ್ನು ನೀಡಲಾಗುತ್ತದೆ. ಆದರೆ ಈ ಆಫರ್ ಮಾತ್ರ ಎಲ್ಲರ ಗಮನ ಸೆಳೆದಿದೆ.
ಮನೆ ಮನೆಗೆ ಆಹಾರ ಪೂರೈಸುವ ಈ ಹೊಟೇಲ್ 500 ಅಥವಾ ಅದಕ್ಕಿಂತ ಅಧಿಕ ಆಹಾರವನ್ನು ಆರ್ಡರ್ ಮಾಡಿದ ಗ್ರಾಹಕರ ಮನೆಗೆ ಆಹಾರದ ಜೊತೆ ಈರುಳ್ಳಿಯನ್ನು ಕೂಡಾ ಉಚಿತವಾಗಿ ಕೊಡಲಿದ್ದಾರೆ. ಅಷ್ಟು ಮಾತ್ರವಲ್ಲದೇ ಪರಿಸರ ಪ್ರೇಮಿಗಳಾದ ಅವರು ಹೋಟೆಲ್ಗೆ ಬಂದ ಎಲ್ಲಾ ಗ್ರಾಹಕರಿಗೆ ಉಚಿತ ಸಸಿಯನ್ನು ಕೂಡಾ ಕೊಡುಗೆಯಾಗಿ ನೀಡುತ್ತಿದ್ದಾರೆ.