ಶ್ರೀನಗರ, ಡಿ 4 (Daijiworld News/ MB) : ಹಿಮಪಾತದಿಂದ ನಾಲ್ವರು ಯೋಧರು ಹುತಾತ್ಮರಾದ ಘಟನೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ ಒಸಿ)ಯ ಬಳಿ ಸಂಭವಿಸಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಹುತಾತ್ಮ ಯೋಧರನ್ನು ಹವಲ್ದಾರ್ ರಾಜೇಂದರ್, ಸೈನಿಕರಾದ ಕಮಲ್ ಕುಮಾರ್ ಮತ್ತು ಅಮಿತ್ ಕುಮಾರ್ ಎಂದು ಗುರುತಿಸಲಾಗಿದ್ದು ಬಂಡಿಪೋರಾ ಜಿಲ್ಲೆಯ ಗುರೆಜ್ ಸೆಕ್ಟರ್ ನಲ್ಲಿ ಸಂಭವಿಸಿದ ಮತ್ತೊಂದು ಹಿಮಪಾತದಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಓರ್ವ ಯೋಧನನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗಲ್ ಶಿಬಿರದ ನಾಲ್ವರು ಮಂಗಳವಾರ ಸಂಜೆ ಗಡಿ ನಿಯಂತ್ರಣಾ ರೇಖೆಯಲ್ಲಿನ ಕರ್ನಾ ಸೆಕ್ಟರ್ ನಲ್ಲಿ ಹಿಮಪಾತವಾಗಿ ಕೊಚ್ಚಿ ಹೋಗಿದ್ದು ಸನಿಹದಲ್ಲಿದ್ದ ಇತರ ಸೇನಾ ಶಿಬಿರದ ಯೋಧರು ಶೋಧ ಕಾರ್ಯ ನಡೆಸಿದ್ದು ವಿಕಾಸ್ ಕುಮಾರ್ ಎಂಬ ಯೋಧನನ್ನು ರಕ್ಷಣೆ ಮಾಡಿದ್ದರು.
ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಮಂಗಳವಾರ ಮಧ್ಯರಾತ್ರಿಯವರೆಗೆ ಮುಂದುವರೆದಿದ್ದು ಮೂವರು ಯೋಧರ ಮೃತ ದೇಹವನ್ನು ಹಿಮದಿಂದ ಹೊರ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.