ಮುಂಬೈ, ಡಿ 05 (Daijiworld News/MB): 18 ಜನ ಭಾರತೀಯರನ್ನು ಸೇರಿದಂತೆ 19 ಜನ ಸಾಗರಯಾನಿಗಳನ್ನು ಕಡಲ್ಗಳ್ಳರು ನೈಕೀರಿಯಾದ ಬಾನಿಯ ದಕ್ಷಿಣಕ್ಕಿರುವ ಕಡಲಕಿನಾರೆ ಸಮೀಪದ 22ನೇ ನಾಟಿಕಲ್ ಮೈಲು ಬಳಿ ಅಪಹರಣ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಅಪಹರಣ ಮಾಡಿ ಕಡಲ್ಗಳ್ಳರು ಅಪಹರಣ ಮಾಡುವ ಮುನ್ನ ಹಡಗಿನ ಮುಖ್ಯಾಧಿಕಾರಿಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಮುಂಬೈನಲ್ಲಿರುವ ಅವರ ಪತ್ನಿಗೆ ಕರೆ ಮಾಡಿದ್ದಾರೆ.
ಅವರ ಚಲನವಲನಗಳ ಕುರಿತು ಈವರೆಗೂ ಯಾವುದೇ ಮಾಹಿತಿ ದೊರಕಿಲ್ಲ. ಅಧಿಕಾರಿಯ ಭದ್ರತಾ ದೃಷ್ಟಿಯಿಂದ ಹೆಸರನ್ನು ಬಹಿರಂಗ ಮಾಡಿಲ್ಲ.
ಸಶಸ್ತ್ರರಾದ ಕಡಲ್ಗಳ್ಳರು ಆಂಗ್ಲೋ ಈಸ್ಟರ್ನ್ ನಿರ್ವಹಣೆಯ ನವ್ ಕನ್ಸ್ಟಲೇಶನ್ ಮೇಲೆ ದಾಳಿ ಮಾಡಿ ಹಡಗನ್ನು ವಶಪಡಿಸಿಕೊಂಡಿದ್ದು ಈ ದಾಳಿಯ ವೇಳೆ ಹಡಗಿಗೆ ಯಾವುದೇ ಬೆಂಗಾವಲು ಇರಲಿಲ್ಲ ಎಂದು ವರದಿಯಾಗಿದೆ.
ಈ ಪ್ರದೇಶವು ಕಡಲ್ಗಳ್ಳರ ತಾಣ ಎಂದು ಹೇಳಗಾಗಿದ್ದು 26 ಸಿಬ್ಬಂದಿಗಳು ಇದ್ದು ಈ ಪೈಕಿ ಒಬ್ಬರು ಟರ್ಕಿಯವರು ಹಾಗೂ 7 ಜನರು ಹಡಗಿನಲ್ಲೇ ಉಳಿದಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಹಡಗಿನ ಮುಖ್ಯಾಧಿಕಾರಿಯ ತಂದೆ "ನನ್ನ ಮಗ 15 ವರ್ಷಗಳಿಂದ ಈ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕ್ಯಾಪ್ಟನ್ ಆಗಿದ್ದಾರೆ. ಮಂಗಳವಾರ ರಾತ್ರಿ 10:15ರ ಸಮಯಕ್ಕೆ ಪತ್ನಿಗೆ ಕರೆ ಮಾಡಿ ಕರ್ತವ್ಯಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಬುಧವಾರ ಅವರನ್ನು ಅಪಹರಣ ಮಾಡಲಾಗಿದೆ ಎಂದು ಕಂಪೆನಿಯಿಂದ ಕರೆ ಬಂದಾಗ ಆಘಾತವಾಯಿತು ಎಂದು ತಿಳಿಸಿದ್ದಾರೆ.