ಉತ್ತರ ಪ್ರದೇಶ, ಡಿ 05 (Daijiworld News/MB): ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದ ಕ್ರೂರ ಅತ್ಯಾಚಾರದಿಂದ ಬದುಕುಳಿದ 20 ವರ್ಷದ ಯುವತಿಗೆ ಬೆಂಕಿ ಹಚ್ಚಲಾಗಿದೆ. ಅವಳ ಮೇಲೆ ಅತ್ಯಾಚಾರವೆಸಗಿದ ಐವರು ಈ ಹತ್ಯೆಯ ಹಿಂದೆ ಇರುವುದಾಗಿ ತಿಳಿದು ಬಂದಿದೆ.
ಅತ್ಯಾಚಾರ ಆರೋಪಿ ಹಾಗೂ ಅವನ ಸ್ನೇಹಿತರು ಯುವತಿಯು ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ಆಕೆಯನ್ನು ಅಡ್ಡಗಟ್ಟಿ ಹಳ್ಳಿಯ ಹೊರಗಿರುವ ಹೊಳ್ಳಕ್ಕೆ ಕರೆದೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಯುವತಿಯು ಮಾರ್ಚ್ನಲ್ಲಿ ಅತ್ಯಾಚಾರಕ್ಕೆ ಒಳಪಟ್ಟಿದ್ದು ಅತ್ಯಾಚಾರ ಮಾಡಿದ ಆರೋಪಿಗಳಾದ ಐವರ ಪೈಕಿ ಮೂವರನ್ನು ಮಾತ್ರ ಪೊಲೀಸರು ಬಂಧನ ಮಾಡಿದ್ದು ಉಳಿದ ಇಬ್ಬರು ಇನ್ನೂ ತಲೆ ಮರೆಸಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದು ಈ ಪೈಕಿ ಓರ್ವ ಅತ್ಯಾಚಾಋ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಸ್ಥಿತಿ ಗಂಭಿರವಾದ ಕಾರಣದಿಂದಾಗಿ ಖಾಸಗೀ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಯುವತಿಯ ದೇಹವು ಶೇಕಡ 90 ರಷ್ಟು ಸುಟ್ಟು ಹೋಗಿದೆ.
ಯುವತಿಯನ್ನು ಲಕ್ನೋದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೂ ಮೂವರು ಆರೋಪಿಗಳನ್ನು ಬಂಧಿಸಿದ್ದು ಇನ್ನಿಬ್ಬರ ಶೋಧ ಕಾರ್ಯಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.