ಬೆಂಗಳೂರು, ಡಿ 05 (Daijiworld News/MB): ರಾಜ್ಯದಲ್ಲಿರುವ ಬಿಜೆಪಿ ಸರಕಾರದ ಭವಿಷ್ಯ ನಿರ್ಧಾರ ಮಾಡಲಿರುವ ಉಪಚುನಾವಣೆ ಇಂದು ಬೆಳಿಗ್ಗೆಯಿಂದ ಆರಂಭವಾಗಿದ್ದು, ಮತದಾನವು ನೀರಸವಾಗಿ ನಡೆಯುತ್ತಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಮಧ್ಯಾಹ್ನ 1 ಗಂಟೆಯವರೆಗೆ ಸುಮಾರು ಶೇಕಡ 38ರಷ್ಟು ಮತದಾನವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಮಧ್ಯಾಹ್ನ 1 ಗಂಟೆಯವರೆಗೆ ಉಪಚುನಾವಣೆಯ ಕ್ಷೇತ್ರಗಳಾದ ಯಲ್ಲಾಪುರ- ಶೇ.41.72, ಅಥಣಿ- ಶೇ.40.89, ಕೆ.ಆರ್ ಪೇಟೆ- ಶೇ.39.47, ಚಿಕ್ಕಬಳ್ಳಾಪುರ- ಶೇ.39.3, ಹಿರೇಕೆರೂರು- ಶೇ.38.63, ಹುಣಸೂರು- ಶೇ.38.2, ಕಾಗವಾಡ- ಶೇ.37.72, ಗೋಕಾಕ್- ಶೇ.37.37, ರಾಣೇಬೆನ್ನೂರು- ಶೇ.36.9, ವಿಜಯನಗರ- ಶೇ.34.95, ಹೊಸಕೋಟೆ- ಶೇ.33.24, ಯಶವಂತಪುರ- ಶೇ.27.29, ಮಹಾಲಕ್ಷ್ಮಿ ಲೇಔಟ್- ಶೇ.22.71, ಕೆ.ಆರ್ ಪುರ- ಶೇ.22.23, ಶಿವಾಜಿನಗರ- ಶೇ.22.12 ಮತದಾನ ನಡೆದಿದೆ.
ಈ ಪೈಕಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ವರೆಗೆ ಗರಿಷ್ಠ ಪ್ರಮಾಣದ ಮತದಾನ ನಡೆದಿದ್ದು, ಶಿವಾಜಿನಗರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ.