ಹೈದಾರಾಬಾದ್, ಡಿ 06 (Daijiworld News/MB): ಹೈದರಾಬಾದ್ 26 ವರ್ಷದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳು ಪೊಲೀಸರು ಎನ್ಕೌಂಟರ್ ಮಾಡಿ ಬೆನ್ನಲ್ಲೇ ಪ್ರಿಯಾಂಕ ರೆಡ್ಡಿಯವರ ಕುಟುಂಬ ’ಪ್ರಿಯಾಂಕಳಿಗೆ ನ್ಯಾಯ ದೊರೆಯಿದೆ’ ಎಂದು ಹೇಳಿದ್ದಾರೆ.
ನವೆಂಬರ್ 27 ರಂದು ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ತೆಲಂಗಾಣ ಪೊಲೀಸರು ಅತ್ಯಾಚಾರ ನಡೆಸಿದ ಸ್ಥಳದಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು ಇದನ್ನು ತಿಳಿದ ಕುಟುಂಬಸ್ಥರಿಗೆ ಈಗ ಮನಶಾಂತಿ ದೊರೆತಿದೆ.
ಶಮ್ಶಾಬಾದ್ನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಎನ್ಕೌಂಟರ್ ವಿಚಾರದಲ್ಲಿ ಮಾತಾನಾಡಿದ ಪ್ರಿಯಾಂಕ ಅವರ ತಂದೆ "ಇಂದು ಪ್ರಿಯಾಂಕಳಿಗೆ ಶಾಂತಿ ದೊರೆಯುತ್ತದೆ. ತೆಲಂಗಾಣ ಸರಕಾರ, ಪೊಲೀಸರು ಹಾಗೂ ನಮ್ಮ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ" ಎಂದು ಹೇಳಿದ್ದಾರೆ.
ಈ ಎನ್ಕೌಂಟರ್ನಿಂದಾಗಿ ನನ್ನ ಮಗಳು ಹಿಂದಿರುಗಿ ಬರಲಾರಲು. ಆದರೆ ಇದು ನಮ್ಮ ಸಮಾಜಕ್ಕೆ ಒಂದು ಸಂದೇಶವನ್ನು ರವಾನೆ ಮಾಡುತ್ತದೆ. ಇದರಿಂದಾಗಿ ಕ್ರಿಮಿನಲ್ಗಳಲ್ಲಿ ಭಯ ಹುಟ್ಟಿ ಅತ್ಯಾಚಾರ ಮಾಡುವ ದೈರ್ಯ ಮಾಡುವುದಿಲ್ಲ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮೊಹಮ್ಮದ್ ಆರಿಫ್, ಮೂವರು ಕ್ಲೀನರ್ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು.
ಆರೋಪಿಗಳನ್ನು ಪೊಲೀಸರು ಅತ್ಯಾಚಾರ ಹಾಗೂ ಹತ್ಯೆ ನಡೆದ ಸ್ಥಳಕ್ಕೆ ಮಹಜರಿಗೆ ಕರೆದೋಯ್ದಿದ್ದ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು ಅರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.