ಹೈದರಾಬಾದ್, ಡಿ 06 (Daijiworld News/MB) : ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಹಾಗೂ ಹತ್ಯೆ ಮಾಡಿದ ಆರೋಪಿಗಳ ಎನ್ಕೌಂಟರ್ನ ಸುದ್ದಿ ದೇಶಾದ್ಯಂತ ಪಸರಿಸಿದ್ದು, ಕಾಲೇಜಿಗೆ ಬಸ್ನಲ್ಲಿ ತೆರಳುತ್ತಿದ್ದ ಯುವತಿಯರು ಎನ್ಕೌಂಟರ್ಗೆ ಶ್ಲಾಘನೆ ವ್ಯಕ್ತಪಡಿಸಿದ ವಿಡಿಯೋ ಈಗ ವೈರಲ್ ಆಗುತ್ತಿದೆ.
ವಿದ್ಯಾರ್ಥಿನಿಯರು "ಡಿಸಿಪಿ ಝಿಂದಾಬಾದ್, ಎಸಿಪಿ ಝಿಂದಾಬಾದ್, ಥಾಂಕ್ಯೂ ತೆಲಂಗಾಣ ಪೊಲೀಸ್" ಎಂದು ಘೋಷಣೆ ಕೂಗಿದ್ದಾರೆ.
ಹಾಗೆಯೇ ಎನ್ಕೌಂಟರ್ ನಡೆದ ವಿಚಾರ ತಿಳಿದ ಬೆನ್ನಲ್ಲೆ ಸಾವಿರಾರು ಜನರು ಸ್ಥಳಕ್ಕೆ ಆಗಮಿಸಿದ್ದು ಪ್ರಿಯಾಂಕ ರೆಡ್ಡಿಯನ್ನು ಸುಟ್ಟ ಸ್ಥಳಕ್ಕೆ ಹೂಗಳನ್ನು ಅರ್ಪಿಸಿ ಅಲ್ಲಿಂದ ಎನ್ಕೌಂಟರ್ ನಡೆದ ಸ್ಥಳಕ್ಕೆ ತೆರಳುತ್ತಿದ್ದಾರೆ. ಎನ್ಕೌಂಟರ್ ನಡೆದ ಸ್ಥಳ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ.