ಬೆಂಗಳೂರು, ಡಿ 06 (Daijiworld News/MB) : ನೆರೆಹೊರೆಯವರು ನಿಂದಿಸಿದರು ಎಂಬ ಕಾರಣಕ್ಕೆ 10 ನೇ ತರಗತಿ ಓದುತ್ತಿರವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವಿವೇಕ್ ನಗರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿ ರುದ್ರಣ್ಣ ಗಾರ್ಡನ್ ನಿವಾಸಿ ರೇವತಿ (17) ಸೋಮವಾರ ಕ್ಷುಲ್ಲಕ ಕಾರಣಕ್ಕೆ ನೆರೆಹೊರೆಯವರ ಜೊತೆ ಜಗಳವಾಡಿಕೊಂಡಿದ್ದು ಸಂಜೆ ಪಕ್ಕದ ಮನೆಯವರು ಮನೆಗೆ ಬಂದು ಆಕೆಯ ನಡತೆಯ ಕುರಿತು ಮಾತಾನಾಡಿಕೊಂಡಿದ್ದರು.
ಈ ಕಾರಣದಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿನಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಯತ್ನ ಮಾಡಿದ್ದು, ಆಕೆಯ ಸಂಬಂಧಿಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು.
ತಕ್ಷಣವೇ ಆಕೆಯ ಪೋಷಕರು ವಿವೇಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ರೋಜಾ, ಚೇತು, ಆಕಾಶ್, ದೀಪಾ, ಅಭಿನಯ, ಬೀನಾ ಮತ್ತು ಇಳಂ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಐವರು ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.