ನವದೆಹಲಿ, ಡಿ 06 (Daijiworld News/MB) : ಅಕ್ರಮ ಬಂಧನ ಆರೋಪದಲ್ಲಿ ಇತ್ತೀಚೆಗೆ ಸುದ್ದಿಯಲ್ಲಿದ್ದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ ಫ್ರಾನ್ಸ್ ಸರ್ಕಾರ ತನಿಖೆ ಆರಂಭ ಮಾಡಿದೆ.
ಫ್ರಾನ್ಸ್ ಸರಕಾರವು ಫ್ರೆಂಚ್ ಪ್ರಜೆ ಹಾಗೂ ನಿತ್ಯಾನಂದನ ಮಾಜಿ ಭಕ್ತೆ ನಿತ್ಯಾನಂದ ಅವರು ತನಗೆ 285 ಕೋಟಿ ರೂ. ವಂಚನೆ ಮಾಡಿದ್ದರೆಂದು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಈ ದೂರಿಗೆ ಸಂಬಂಧಿಸಿದಂತೆ ಪ್ರಾನ್ಸ್ನ ಆಂತರಿಕ ಸಚಿವಾಲಯವು ನಿತ್ಯಾನಂದನ ವಿರುದ್ಧ ವಂಚನೆಯ ವಿವರಗಳನ್ನು ಸಂಗ್ರಹಿಸುತ್ತಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಪ್ರಾನ್ಸ್ ಮೂಲದ ಅನೇಕ ಭಕ್ತರು ನಿತ್ಯಾನಂದನ ವಿರುದ್ಧ ದೂರು ನೀಡಿದ ನಂತರ ತನಿಖೆ ಆರಂಭಿಸಿದ್ದು ತನಿಖೆಯ ಭಾಗವಾಗಿ ನಿತ್ಯಾನಂದನ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಕೋರಿದೆ ಎಂದು ಹೇಳಲಾಗಿದ್ದು ಹಾಗೆಯೇ ನವದೆಹಲಿಯಲ್ಲಿರುವ ಫ್ರೆಂಚ್ ರಾಯಭಾರಿ ಕಚೇರಿಗೆ ದೂರಿನ ವಿವರಣೆ ನೀಡಿ ಮಾಹಿತಿ ಸಂಗ್ರಹ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಅತ್ಯಾಚಾರ ಆರೋಪಿಯಾಗಿರುವ ಸ್ವಯಂಘೋಷಿತ ದೇವ ಮಾನವ ಅಕ್ರಮ ಬಂಧನದ ಆರೋಪಿಯಾಗಿದ್ದು ಪರಾರಿಯಾಗಿದ್ದು ಈಗ ಈಕ್ವೆಡಾರ್ನಲ್ಲಿ ಹೊಸ ದ್ವೀಪ ಖರೀದಿಸಿ ಕೈಲಾಸ ಎಂಬ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಿರುವುದಾಗಿ ವೆಬ್ಸೈಟ್ ಮುಖೇನ ತಿಳಿಸಿದ್ದಾರೆ. ಹಾಗೆಯೇ ಆ ವೆಬ್ಸೈಟ್ನಲ್ಲೇ ಅವರ ದೇಶಕ್ಕೆ ಸಂಬಂಧ ಪಟ್ಟ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ.